Monday, January 11, 2016

Neeti Shataka Shloka 01ಬೋದ್ಧಾರೋ ಮತ್ಸರಗ್ರಸ್ತಾಃ ಪ್ರಭವಃ ಸ್ಮಯದೂಷಿತಾಃ | ಅಬೋಧೋಪಹತಾಶ್ಚಾನ್ಯೇ ಜೀರ್ಣಮಂಗೇ ಸುಭಾಷಿತಮ್ ||1||
बोद्धारो मत्सरग्रस्ताः प्रभवः स्मयदुषिताः| अबोधोपहताश्चान्ये जीर्णमंगे सुभाषितम् ||1||
bōd'dhārō matsaragrastā prabhava smayadūitā | abōdhōpahatāścān'yē jīramagē subhāitam ||1||

ಭರ್ತೃಹರಿ ನೋವಿನಿಂದ ತನ್ನ ಅಳಲನ್ನು ತೋಡಿಕೊಂಡ ಪದ್ಯವಿದು...
ತಾನು ರಚಿಸಲು ಹೊರಟ ಈ ಸುಭಾಷಿತವನ್ನು ತಾನು ಯಾರಿಗಾಗಿ ಹೇಳಬೇಕು ? ಸುಭಾಷಿತದ ಒಳ ಅರ್ಥವನ್ನು ತಿಳಿಯ ಬಲ್ಲವರು, ತಿಳಿದು ಆಸ್ವಾದಿಸುವವರು, ತಿಳುವಳಿಕೆ  ಇರುವವರು ಅಂದರೆ ಪಂಡಿತರು ಅಥವಾ ಜ್ಞಾನಿಗಳು ಮಾತ್ರ... ಆದರೆ ಈ ಪಂಡಿತರ ಸಹಜ ಸ್ವಭಾವ ಮತ್ಸರದಿಂದ  (ಹೊಟ್ಟೆಕಿಚ್ಚಿನಿಂದ) ಕೂಡಿದೆ. ಒಬ್ಬ ಪಂಡಿತ ಇನ್ನೊಬ್ಬ ಪಂಡಿತನ ಉತ್ಕರ್ಷವನ್ನು ಕಂಡು ಅಸೂಯೆ ಪಡುವುದೇ ಹೆಚ್ಚು....

(ಪಂಡಿತೋವ ಪಂಡಿತಂ ದೃಷ್ಟ್ವಾ ಶ್ವಾನವತ್ ಗುರ್ಗುರಾಯತೇ ಪರೋತ್ಕರ್ಷಾ ಸಹಿತ್ತಂ ಅಸೂಯಂ|
ಮದ್ವಶೋ ನಾಯಂ ಇತಿ ಮತ್ಸರ ಈರಿತಃ| ಇವೆಲ್ಲ ಮತ್ಸರದ ಕೆಲವು ಮುಖಗಳು) ಹೀಗೆ ತಿಳಿದ ವಿದ್ವಾಂಸರು ಇನ್ನೊಬ್ಬ ವಿದ್ವಾಂಸನನ್ನು ಸುಲಭದಲ್ಲಿ ಮೆಚ್ಚಿಕೊಳ್ಳುವುದಿಲ್ಲ... ಆದ್ದರಿಂದ ತನ್ನ  ಸುಭಾಷಿತವನ್ನು ಪಂಡಿತರು ಓದದೇ ಹೋಗಬಹುದು. ತಿಳಿದವರ ಕಥೆ ಹೀಗೆ.

ಹಿಂದೆ ಕವಿಗಳೆಲ್ಲ ರಾಜಾಶ್ರಯದಲ್ಲಿ ಬೆಳೆಯುತ್ತಿದ್ದರು... ಆದರೆ ಇಂದು ರಾಜರುಗಳಿಗೆ ಶ್ರೀಮಂತಿಕೆಯ ಮದ, ಅಹಂಕಾರ ತುಂಬಿ ಬಿಟ್ಟಿದೆ, ಆದ್ದರಿಂದ ನನ್ನಂತಹ ಸಾಮಾನ್ಯರು ಬರೆದ ಸುಭಾಷಿತ ಅವರ ಕಣ್ಣಿಗೇ ಬೀಳುವುದಿಲ್ಲ.... ಆದ್ದರಿಂದ ವಿದ್ವಾಂಸರ ಆಶ್ರಯವೂ ಇಲ್ಲದರಾಜಾಶ್ರಯವೂ ಇಲ್ಲದ ಸ್ಥಿತಿ ತನ್ನದು ಎನ್ನುತ್ತಾನೆ....

ಹೋಗಲಿ, ಉಳಿದ ಜನಸಾಮಾನ್ಯರ ಆಶ್ರಯವಾದರೂ ದೊರಕೀತು ಅಂದುಕೊಂಡರೆ, ನಾನು ಏನು ಹೇಳಿದ್ದೇನೆ ಅನ್ನುವುದನ್ನೂ ಅರ್ಥಮಾಡಿಕೊಳ್ಳುವ ತಾಕತ್ತಿಲ್ಲದ ದಡ್ಡರು. ಅವರಿಂದ ಮೆಚ್ಚುಗೆ ಪಡೆದು ಏನಾಗಬೇಕಿದೆ...

ಹಾಗಾಗಿ ತಾನು ಯಾರಿಗೋಸ್ಕರ ಸುಭಾಷಿತ ರಚನೆ ಮಾಡಬೇಕು ?.. ಯಾರೂ ಕೇಳಿ ಸಂತೋಷ ಪಡುವವರಿಲ್ಲ... ಆದ್ದರಿಂದ ನನ್ನ ಸುಭಾಷಿತಗಳು ನನ್ನ ಮನಸ್ಸಿನಲ್ಲೇ ಹುದುಗಿ ಒಂದು ದಿನ ನನ್ನ ದೇಹದೊಂದಿಗೆ ಕರಗಿ ಹೋಗುತ್ತವೆ ಅಂತ ದುಃಖಿಸುತ್ತಾನೆ... ಸುಭಾಷಿತ ರಚಿಸುವ ಮುನ್ನವೇ ಭರ್ತೃಹರಿ ಎದುರಿಸಿದ ಸಮಸ್ಯೆಗಳಿವು...

ಹೀಗೆ ಭರ್ತೃಹರಿ ತನ್ನ ಅಳಲನ್ನು ತೋಡಿಕೊಂಡ ಮೇಲೆ ಮತ್ತೆ ಸುಭಾಷಿತ ರಚನೆಮಾಡಿದ. ಏಕೆಂದರೆ ಭವಭೂತಿಗೂ ಆದ ಅನುಭವ ಇದು. ಅವನು ಹೇಳಿದಂತೆ, ತನ್ನನ್ನು ತನ್ನ ಕಾಲದವರಾರೂ ಮೆಚ್ಚಿಕೊಳ್ಳಲಿಲ್ಲ ಆದರೂ ಮುಂದೆ ಯಾರಾದರೂ ತನ್ನನ್ನು ಮೆಚ್ಚಿಕೊಳ್ಳುವವರು ಹುಟ್ಟಿಯಾರು ಅಂತ ಬರೆಯುತ್ತೇನೆ ಅಂತ ಬರೆದ... ಹಾಗೆಯೇ ಭರ್ತೃಹರಿ ಕೂಡ ಮುಂದೆ ತನ್ನ ಸುಭಾಷಿತಗಳನ್ನು ಮೆಚ್ಚಿಕೊಳ್ಳುವವರು ಯಾರಾದರೂ ಹುಟ್ಟಿಯಾರು ಅಂತ ಸುಭಾಷಿತಗಳನ್ನು ರಚಿಸಲು ತೊಡಗಿದ...

****      

This is a verse in which Bhartruhari painfully reflects on the anguish in his heart …
He wonders, who would be the recipient of these subhāitas (words of good counsel) that he has set forth to compose? The learned, who are capable of understanding the intent of the subhāitas, relish the same upon understanding them; by ‘learned,’ it is meant either scholars or the wise only … The nature of such scholars, however, is impregnated with spite (jealousy) … The delight of one scholar most often results in scorn (envy), in other scholars. 

(पण्डितोव पण्डितं दृष्ट्वा श्वानवत गुर्गुरायते | पारोत्कर्षा सहित्तं असूयं | मद्वशो नायं इति मत्सर ईरितः  | - paṇḍitōva paṇḍita dr̥ṣṭvā śvānavat gurgurāyatē | parōtkarā sahitta asūya|madvaśō nāya iti matsara īrita| - these are the various ways in which jealousy is reflected). Thus placed, scholars do not easily appreciate others of their ilk … Therefore, it bodes well, if these subhāitas elude the scholars. Alas, this is the lot of the learned.  

In the good old days(preceding the times of Bhartruhari), poets enjoyed the patronage of Kings … Now however, Kings are steeped in arrogance, ego fills their heart, as such, ‘Subhāitas penned by ordinary folk like me is not in their sight,’ … Hence, he (Bhartruhari) states that his position neither finds comfort in the learned, nor does it enjoy patronage of the Kings …

In case one were to expect commiseration in this matter by the remaining lot, namely commoners, ‘they are incapable of making sense of what is uttered by me …
Therefore, who should I compose these subhāitas for? … There is none that would be joyous on hearing them …’ He laments thereby, ‘Subhāitas which arise in my mind, would someday, wither away with my own body…’ These are problems that confound Bhartruhari prior to his composing the subhāitas …


In this way, post the expression of his anguish, Bhartruhari proceeded with composing his subhāitas. This is similar to the experience of Bhavabhuti. Bhavabhuti had expressed that even as none of his contemporaries appreciated his work, his writings were for those who may be born in the future, who might see its worth … In a like manner, Bhartruhari too set forth composing his subhāitas, reposing his faith that future generations may give these compositions, the merit that is truly theirs …

No comments:

Post a Comment