Saturday, January 16, 2016

Neeti Shataka Shloka 07

ಯದಾ ಕಿಂಚಿತ್ ಜ್ಞೋsಹಂ ದ್ವಿಪ ಇವ ಮದಾಂಧಃ ಸಮಭವಂ
ತದಾ ಸರ್ವಜ್ಞೋsಸ್ಮೀತ್ಯಭವದಲಿಪ್ತಂ ಮಮ ಮನಃ |
ಯದಾ ಕಿಂಚಿತ್ ಕಿಂಚಿತ್ ಬುಧಜನಸಕಾಶಾದವಗತಂ
ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ ||7||

यदा किंचित ज्ञोऽहं द्विप इव मदांधः समभवं
तदा सर्वज्ञोऽस्मीत्यभवदलिप्तं मम मनः |
यदा किंचित् किंचित् बुधजनसकाशादवगतं
तदा मूर्खोस्मीति ज्वर इव मदो में व्यपगतः||7||

Yadā kin̄cit jñōsha dvipa iva madāndha samabhava
tadā sarvajñōssmītyabhavadalipta mama mana |
yadā kin̄cit kin̄cit budhajanasakāśādavagata
tadā mūrkhōsmīti jvara iva madō mē vyapagata ||7||

ಭರ್ತೃಹರಿ, ಈ ಮೊದಲು ಮನುಷ್ಯನ ಮೂರ್ಖತನದ ಬಗೆಗೆ ಹೇಳುತ್ತಾ ಅಜ್ಞರ ಚಿತ್ರಣವನ್ನು ಕೊಟ್ಟನಂತರ, ಮೌಢ್ಯಕ್ಕೆ ತಾನೇ ಬಲಿಯಾದ ಬಗೆಯನ್ನು ತನ್ನದೇ ದೃಷ್ಟಾಂತದ ಮೂಲಕ ನಮ್ಮ ಮುಂದೆ ಹೀಗೆ ಬಿಚ್ಚಿಟ್ಟದ್ದಾನೆ :
ಮೊದಲು ನಾನು ಸ್ವಲ್ಪ ಅಧ್ಯಯನ ಮಾಡಿದೆ, ಸ್ವಲ್ಪ ವಿಷಯ ತಿಳಿಯಿತು, ಅದರಿಂದ ಕಿಂಚಿತ್ ಜ್ಞಾನ ಬಂತು. ಅಷ್ಟೇ ಓದಿನಿಂದ  ಪಾಂಡಿತ್ಯದ ಮದವೇರಿತು... ನನ್ನಂತಹ ವಿದ್ವಾಂಸರು ಯಾರಿದ್ದಾರೆ ಅನ್ನುವ ಭ್ರಮೆ ಬಂದು, ಮತ್ತೇರಿದ ಆನೆಯಂತೆ ಪಾಂಡಿತ್ಯದ ಮದ ತಲೆಗೇರಿತು...
(ದ್ವಿಪ= ಎರಡು ಅಂಗಗಳಿಂದ  ಕುಡಿಯುವ ಪ್ರಾಣಿ. ಆನೆ ಸೊಂಡಿಲಿನಿಂದ ಮತ್ತು ಬಾಯಿಯಿಂದ ನೀರು ಕುಡಿಯುತ್ತದೆ)
ಆ ಪಾಂಡಿತ್ಯದ ಮದದಿಂದ, ನಾನೇ ಸರ್ವಜ್ಞನನ್ನಷ್ಟು ತಿಳಿದವರು ಯಾರಿದ್ದಾರೆ ಅನ್ನುವ ರೀತಿಯಲ್ಲಿ ನನ್ನ ಮನಸ್ಸು ಅಹಂಕಾರಕ್ಕೆ ಒಳಗಾಯಿತು...
ಒಂದು ಆನೆಗೆ ಮದ ಏರಿದಾಗ ಯಾರನ್ನೂ ಲಕ್ಷಿಸದೆ ಹೇಗೆ ದುರ್ವರ್ತನೆ ಮಾಡುತ್ತದೋ ಹಾಗೆ ನಾನು ಅರ್ಧಂಬರ್ಧ ತಿಳುವಳಿಕೆಯಿಂದ, ಅಹಂಕಾರದಿಂದ, ಎಲ್ಲರನ್ನೂ ವಾಕ್ಯಾರ್ಥಗಳಿಂದ ಖಂಡಿಸುತ್ತಾ ನಾನೇ ಸರ್ವಜ್ಞ ಅಂತ ಮೆರೆದೆ...
ಆಮೇಲೆ ದೊಡ್ಡವರ, ತಿಳಿದವರ, ವಿದ್ವಾಂಸರ, ಅನುಭವಿಗಳ, ಅನುಭಾವಿಗಳ ಮಾತನ್ನು ಕೇಳುತ್ತಾ, ಕೇಳುತ್ತಾ ಗೊತ್ತಾಯಿತು, ನನಗೆ ಏನೂ ಗೊತ್ತಿಲ್ಲ , ನಾನು ತಿಳಿದಿರುವುದು ಅತ್ಯಲ್ಪ , ನಾನು ದೊಡ್ಡ ಅಜ್ಞಾನಿಯಿದ್ದೇನೆ, ಎಂಥಾ ಪೆದ್ದನಾಗಿದ್ದೇನೆ ಅನ್ನುವ ಅರಿವು ಬಂದ ಮೇಲೆ ''ಅಲ್ಪ ವಿದ್ಯಾ ಮಹಾಗರ್ವೀ'' ಎಂಬಂತೆ ಇದ್ದ ನನ್ನ ಪಾಂಡಿತ್ಯದ ಮದವೆಲ್ಲ ಜ್ವರಇಳಿದಂತೆ ಜರ್ರನೆ ಜಾರಿಹೋಯಿತು...
ನಾನು ಪಂಡಿತ ಅಂತ ತಿಳಿದಿದ್ದಾಗ ಮೂರ್ಖನಾಗಿದ್ದೆ... ಈಗ ನಾನು ಎಷ್ಟು ಮೂರ್ಖ ಅಂತ ತಿಳಿದ ಮೇಲೆ ನಿಜವಾದ ಪಂಡಿತನಾದೆ ಅನ್ನುತ್ತಾನೆ ಭರ್ತೃಹರಿ....
ಎಷ್ಟೋ ಸಲ ನಾವೇನು ತಿಳಿದಿದ್ದೇವೋ ಅದೇ ದೊಡ್ಡದು ಅನ್ನುವಂತೆ ನಮಗೆ ಭಾಸವಾಗುತ್ತಿರುತ್ತದೆ, ಆದರೆ ಸಜ್ಜನರ ಸಹವಾಸದಿಂದ ನಾವು ತಿಳಿಯಬೇಕಾದದ್ದು ಬೆಟ್ಟದಷ್ಟಿದೆ ಎಂಬ ಅರಿವು ಮೂಡುತ್ತದೆ... ಅದನ್ನು ನೆನಪಿಸುವ ಸುಂದರವಾದ ಶ್ಲೋಕವಿದು...
****
Bhartruhari had thus far in his shlokas, picturized the ways of fools. In this shloka, he brings out with a reference to his own self, how he fell prey to foolish ways.
He says, “I had commenced studying, learnt a bit and from it gained some knowledge. This imbued me with scholarly arrogance … I was deluded that there was none as learned as I. Much like a heady elephant, conceit gripped my head …” 
(द्विपdvipa: An animal that uses two organs to drink viz., an elephant uses its snout and mouth to drink)
“I became egotistic, as I felt I was all-knowing and that there existed none that was as learned as I … Just the way a heady elephant runs amok disregarding everything in its line of sight, I too, with my half-baked learning and inflated ego, roamed around thinking that I was the repository of knowledge … 
“Thence, I happened to hear those who were great, aware, learned, experienced and realized ones, it dawned on me that I was an ignoramus, a dunce. As goes the saying, अल्प विद्या महागर्वि - alp vidya mahaagarvi,’ all my erudition that was propped by my ego, drained out, just as fever would have descended in me …   
‘When I thought I was a scholar I was unwise … Now that I know how foolish I have been, I have actually become learned,” says Bhartruhari …

Very often we gloat that what we know is tremendous; that, however is dwarfed when we associate ourselves with the truly learned ones and realization dawns on us that what remains to be learned is mountainous … This in essence is what the shloka reminds us, in a fragrant manner …                 

No comments:

Post a Comment