Tuesday, January 19, 2016

Neeti Shataka Shloka 09

ಶಿರಃ ಶಾರ್ವಂ ಸ್ವರ್ಗಾತ್ಪಶುಪತಿ ಶಿರಸ್ತಃ ಕ್ಷಿತಿಧರಂ
ಮಹೀಧ್ರಾದುತ್ತುಂಗಾದವನಿಮವನೇಶ್ಚಾಪಿ ಜಲಧಿಮ್ |
ಅಧೋ ಗಂಗಾ ಸೇಯಂ ಪದಮುಪಗತಾ ಸ್ತೋಕಮಥವಾ
ವಿವೇಕಭ್ರಷ್ಟಾನಾಂ ಭವತಿ ವಿನಿಪಾತಃ ಶತಮುಖಃ || 9 ||

शिरः शार्वं स्वर्गात्पशुपति शिरस्तः क्षितिधरं
महीध्रादुत्तुङ्गादवनिमवनेश्चापि जलधिम्|
धो गंगा सेयं पदमुपगता स्तोकमथवा
विवेकभ्रष्टानां भवति विनिपातः शतमुखः|| 9 ||

śira śārva svargātpaśupati śirasta kitidhara
mahīdhrāduttugādavanimavanēścāpi jaladhim |
adhō gagā sēya padamupagatā stōkamathavā
vivēkabhraṣṭānā bhavati vinipāta śatamukha ||9 ||

ಸ್ವರ್ಗಲೋಕದಿಂದ ಕೆಳಗಿಳಿದ ಗಂಗೆ, ಶಿವನ ತಲೆಗೆ ಬಂದು ಬಿದ್ದಿತು, ಇದು ಒಂದು ಅಧಃಪಾತ. ಅಲ್ಲಿಂದ ಹಿಮಾಲಯ ಪರ್ವತದ ಮೇಲೆ ಬಿದ್ದಿತು, ಹಿಮಾಲಯ ಭೂಮಿಯ ಮೇಲಿನ ಎತ್ತರದ ಭಾಗ, ಆ ಹಿಮಾಲಯ ಪರ್ವತಗಳ ಶ್ರೇಣಿಯಿಂದ ಅನೇಕ ಕವಲುಗಳಾಗಿ ಹರಿದ ಗಂಗೆ ಧರೆಗಿಳಿದು ಮತ್ತಷ್ಟು ಅಧಃಪಾತ ಹೊಂದಿ, ಭೂಮಿಯಲ್ಲಿ ಹರಿಯುತ್ತಾ ಕೊನೆಗೆ ಸಮುದ್ರ ಸೇರಿತು... ಹೀಗೆಯೇ ಮೂರ್ಖರ ಅಧಃಪತನ ಅನ್ನುತ್ತಾನೆ ಭರ್ತೃಹರಿ.

ಈ ಶ್ಲೋಕದಲ್ಲಿ ಭರ್ತೃಹರಿ ಗಂಗಾ ನದಿಯನ್ನು ಮೂರ್ಖರ ಅಧಃಪಾತದ ಲಕ್ಷಣಕ್ಕೆ ದೃಷ್ಟಾಂತವಾಗಿ ಕೊಟ್ಟದ್ದು ಅಷ್ಟು ಸಮಂಜಸವಾಗಿಲ್ಲ... ಕಾವ್ಯದ ದೃಷ್ಟಿಯಿಂದಲೂ ಅಷ್ಟು ಒಳ್ಳೆಯ ದೃಷ್ಟಾಂತವಲ್ಲ , ಎಂಬುದು ಆಚಾರ್ಯರ ಅಭಿಪ್ರಾಯ....

ಏಕೆಂದರೆ, ಗಂಗೆಯನ್ನು "ಸ್ವರ್ಗಂಗಾ" ಅಂತ ಕರೆಯುತ್ತಾರೆ... ದೇವಲೋಕದ ಗಂಗಾನದಿ ಸ್ವರ್ಗದಿಂದ ಕೆಳಕ್ಕೆ ಬಿದ್ದಿತು, ಅಂದರೆ ಶಿವನ ಶಿರಸ್ಸಿಗೆ ಬಂದು ಬಿದ್ದಿತು. ಅಧಃಪಾತ ಅಂದರೆ ಕೆಟ್ಟ ಜಾಗಕ್ಕೆ ಬೀಳುವುದು ಅಂತ ಅರ್ಥ. ಸ್ವರ್ಗದಿಂದ ಶಿವನ ಶಿರಸ್ಸುನ್ನು ಸೇರಿದ ಗಂಗೆಯನ್ನು ಅಧಃಪತನ ಅಂತ ಕರೆಯುವುದು ಹೇಗೆ ?   ಆದರೆ, ಬೇಂದ್ರೆಯವರು ಇದಕ್ಕೊಂದು ನಿಜವಾದ ಅರ್ಥಕೊಟ್ಟರು... ಅವರು ಹೇಳಿದರು ಅದು ಗಂಗೆಯ ಅಧಃಪತನವಲ್ಲ , "ಅವತರಣ" ಅಂತ... ಸ್ವರ್ಗಲೋಕದ ಗಂಗೆ ನಮ್ಮನ್ನು ಪಾವನಗೊಳಿಸಲು ಈ ಲೋಕಕ್ಕೆ ಇಳಿದು ಬಂದವಳು... ಆದ್ದರಿಂದ ಬೇಂದ್ರೆಯವರ ದೃಷ್ಟಿಯಲ್ಲಿ ಇದು "ಗಂಗಾವತರಣ"ವಾಯಿತು...

ಭರ್ತೃಹರಿಯ ದೃಷ್ಟಿಯಲ್ಲಿ , ಗಂಗೆ ಸ್ವರ್ಗದಿಂದ ಕೆಳಗೆ ಇಳಿಯುತ್ತಾ ಅಧಃಪಾತ ಹೊಂದುತ್ತಾ ಹೊಂದುತ್ತಾ , ಮಹತ್ತಾಗಿದ್ದದ್ದನ್ನು ಕಳೆದುಕೊಂಡು ಅಲ್ಪತ್ವವನ್ನು ಪಡೆದು, ದೊಡ್ಡ ಗಾತ್ರದಿಂದ ಸಂಕುಚಿತ ಗಾತ್ರ ಪಡೆದು ಅಧಃಪಾತ ಹೊಂದಿದಂತೆ,  "ಯಾರು ವಿವೇಕವಿಲ್ಲದೆ ಬದುಕುತ್ತಾರೆಯೋ, ಅವರು ಜೀವನದಲ್ಲಿ ಜಾರುತ್ತಾ ಜಾರುತ್ತಾ ಅಧಃಪಾತ ಹೊಂದುತ್ತಾರೆ. ಅವರೆಂದೂ ಎತ್ತರಕ್ಕೆ ಏರುವುದಿಲ್ಲ ಎಂಬುದು ಭರ್ತೃಹರಿಯ ಸಂದೇಶ"... 

ಆಚಾರ್ಯರ ಅಭಿಪ್ರಾಯದಂತೆ ಕೇವಲ ಕೊನೆಯ ಸಾಲನ್ನು ಮಾತ್ರ ಅಂದರೆ, ಭರ್ತೃಹರಿಯ ಸಂದೇಶವನ್ನು ಮಾತ್ರ ತೆಗೆದುಕೊಂಡು, ಗಂಗೆಯ ಅಧಃಪಾತವನ್ನು ಮರೆಯುವುದು ಒಳಿತು.... 

ಗಂಗೆಗೆ ವಿವೇಕದ ಪ್ರಶ್ನೆ ಬರುವುದಿಲ್ಲ ಏಕೆಂದರೆ ಅದು ನೀರು, ಕೇವಲ ಜಡ. ತಗ್ಗಿದ್ದಲ್ಲಿ ಕೆಳಕ್ಕೆ ಜಾರುವುದು, ಜಾರುತ್ತಾ ಹರಿಯುವುದು ನೀರಿನ ಸಹಜ ಗುಣ... 

ಆದರೆ, ಗಂಗೆ ಇಳಿದು ಬಂದದ್ದೇ ಭಗೀರಥನ ಹಿರಿಯರ ಉದ್ಧಾರಕ್ಕೋಸ್ಕರ. ಅದರಿಂದ ಸಗರನ  60,000 ಪುತ್ರರು ಸದ್ಗತಿ ಪಡೆದರು. ಈ ದೃಷ್ಟಿಯಿಂದ ಮೂರ್ಖತ್ವದ ಅಧಃಪತನಕ್ಕೆ ಎಂದೂ ಗಂಗೆ ದೃಷ್ಟಾಂತವಾಗಲಾರಳು....


ಆದರೆ ಇಂದು ನಾವು ಗಂಗೆಯನ್ನು ಪವಿತ್ರವಾಗಿ ಉಳಿಸಿಕೊಂಡಿಲ್ಲ.... ಗಂಗೆಯಲ್ಲಿ ನಾವು ಎಲ್ಲ ಹೊಲಸನ್ನೂ ಹರಿಯಬಿಟ್ಟು , ಗಂಗಾಜಲ ಸ್ನಾನಕ್ಕೆ ಕೂಡ ಯೋಗ್ಯವಾಗದ ಸ್ಥಿತಿಯನ್ನು ತಲುಪಿದೆ. ಇದನ್ನು ಗಮನಿಸಿದರೆ ಹಿಂದೆ ದ್ವಾಪರದಲ್ಲಿ ವೇದವ್ಯಾಸರು ಆಡಿದ ಮಾತು ನೆನಪಾಗುತ್ತದೆ, ಅವರು ಅಂದೇ ಹೇಳಿದರು: "ಗಂಗೆ ದ್ವಾಪರಾಂತ್ಯದ 5000 ವರ್ಷಗಳ ನಂತರ ಭೂಮಿಯಲ್ಲಿ ಇರುವುದಿಲ್ಲ... ಅವಳು ಪುನಃ ದೇವಲೋಕಕ್ಕೆ ಹೊರಟು ಹೋಗುತ್ತಾಳೆ" ಅನ್ನುವ ಮಾತು.  ಈಗಿನ ಗಂಗೆಯ ಸ್ಥಿತಿ ನೋಡಿದರೆ, ವೇದವ್ಯಾಸರ ವಾಣಿ ನಿಜವಾಗುತ್ತಿದೆಯೇನೋ ಅನ್ನಿಸುತ್ತಿದೆ. ಎಂಬುದು ಆಚಾರ್ಯರ ಅನಿಸಿಕೆ...   

****

Gangā, descending from the heavens, ‘fell’ on to the head of Śiva; this is deemed to be a slide in her position. Thence, she went on to ‘fall’ on the Himālayas.  Himālayas form the higher reaches of the earth; from the higher ranges of the Himālayas, flowing as multiple streams, Gangā descended to the earth, fell lower and continuing her flow, merged into the ocean … Much the same is the degradation in the lives of fools, says Bhartruhari.

Our Acharyaru has opined that Bhartruhari’s comparison of the slide in the lives of fools to the descending of Ganga, is not very convincing … Poetically too, this symbolism is not harmonious …

Gangā is called स्वर्गंगा (svargaṅgā). From the abode of gods, Gangā descended to the earth i.e. it fell onto the crown of Śiva. ‘To descend,’ implies fall into a bad place. How can anyone construe the landing of Gangā from the heavens onto the head of Śiva as ‘descending,’ then? The legendary Kannada poet Dr. Da Rā Bendre, has however explained this process insightfully … He has said, ‘This does not amount to the slide of Gangā, but her incarnation … She came over from the heavens for our redemption’ … This view of Bendre transforms it to an ‘incarnation of Gangā.’     

Gangā’s movement from the heavens to earth, leads to its slide from a higher position to a lower one, those who are profligate, slide to degradation in living, and they would never be able to regain positions of eminence, is the message of Bhartruhari here.

Our Acharyaru has pointed out that it would augur well to disregard the metaphor of Ganga but sift the message of degradation that Bhratruhari gives us here.
There is no question of attaching ‘prudence’ to the waters of Gangā … water is an inert substance and it’s natural tendency is to flow from higher to lower levels … 
Gangā descended to the earth with a purpose … to redeem Bhagīrata, the childless ruler of Ayodhya, from the sins of his forefathers. Gangā’s action also brought salvation to the 60,000 sons of Sagara.

Gangā, in the modern day, is no longer pristine … We continue to dump all kinds of waste into her flowing waters and have made it unfit for the purifying ritual of  ‘Gangā snāna.’ Vedavyāsaru had stated in the Dvāpara era itself, that 5000 years post the Dvāpara era, ‘Gangā would cease to exist on the earth … she will return to the heavens.’ Our Acharyaru has reflected that these words seem to be ringing true now …

No comments:

Post a Comment