Monday, January 11, 2016

Neeti Shataka Shloka 02

ಅಜ್ಞಃ ಸುಖಮಾರಾಧ್ಯಃ ಸುಖತರಮಾರಧ್ಯತೇ ವಿಶೇಷಜ್ಞಃ | ಜ್ಞಾನಲವದುರ್ವಿದಗ್ಧಂ ಬ್ರಹ್ಮಾsಪಿ ನರಂ ನ ರಂಜಯತಿ ||2||
अज्ञः सुखमाराध्यः सुखतरमारध्यते विशेषज्ञः| ज्ञानलवदुर्विदग्धं ब्रहमाऽपि नरं रञ्जयति ||2||
ajña sukhamārādhya sukhataramāradhyatē viśēajña | jñānalavadurvidagdha brahmāspi nara na ran̄jayati ||2||

ಒಬ್ಬ ದಡ್ಡ ಇರುತ್ತಾನೆ, ಅವನನ್ನು ತಿದ್ದುವುದು ಬಹಳ ಸುಲಭ. ಅವನಿಗೆ ಸಮಸ್ಯೆ ಬಂದರೆ ಸರಿಯಾದ ಮಾರ್ಗ ತೋರಿದರೆ ಸಾಕುದೊಡ್ಡವರು, ತಿಳಿದವರು ಹೇಳಿದ್ದಾರೆ ಅಂತ ಆತ ಒಪ್ಪಿಕೊಂಡು ನಡೆಯುತ್ತಾನೆ...
ಹಾಗೇ ತುಂಬಾ ತಿಳಿದವರಿಗೆ ಕೂಡ ಸಮಸ್ಯೆಯೇ ಇಲ್ಲ... ಎಲ್ಲ ಸಮಸ್ಯೆಗಳಿಗೂ ಅವರೆ ಪರಿಹಾರ ಕಂಡುಕೊಳ್ಳುತ್ತಾರೆ... ಆದ್ದರಿಂದ ಲೋಕದಲ್ಲಿ, ಒಬ್ಬ ಏನೂ ಅರಿಯದವ ಮತ್ತೊಬ್ಬ ಪೂರ್ತಿ ತಿಳಿದವ ಇವರಿಬ್ಬರೂ ಸುಖವಾಗಿರುತ್ತಾರೆ...
ಆದರೆ ಇಂದು ಸಮಸ್ಯೆ ಇರುವುದೇ ಸ್ವಲ್ಪ ತಿಳಿದವರಿಂದ, ಅರೆಬರೆ ಪಂಡಿತರಿಂದ. ಅಶ್ವತ್ಥಾಮ ಹೇಳಿದಂತೆ - "ಸರ್ವೋಪಿ ಮನ್ಯತೇ ಲೋಕೆ ಆತ್ಮಾನಂ ಬುದ್ಧಿಮತ್ತರಂ " ಈ ಜಗತ್ತಿನಲ್ಲಿ  ಎಲ್ಲರಿಗಿಂತ ತಾನೇ ಶ್ರೇಷ್ಠ ಬುದ್ಧಿವಂತ ಅಂತ ಪ್ರತಿಯೊಬ್ಬನೂ ತಿಳಿದುಕೊಂಡಿರುತ್ತಾನೆ...
ಅಲ್ಪ ಅರಿವಿನಿಂದ ತಾನೇ ದೊಡ್ಡ ವಿದ್ವಾಂಸ, ತನಗೇ ಎಲ್ಲ ಗೊತ್ತಿದೆ ಅಂತ ಭ್ರಮೆಗೊಳಗಾದವನನ್ನು ಬ್ರಹ್ಮದೇವರೇ ಬಂದರೂ ಸಂತೋಷಪಡಿಸಲು ಸಾಧ್ಯವಿಲ್ಲ... ರೊಪ್ಸೆನ್ ರಾಂಪ ಹೇಳಿದ ಮಾತಿನಂತೆ - "He that knows not that he knows not, is a fool - shun him" ಅಂತ.
ಇದು ವಸ್ತುತಃ ಭರ್ತೃಹರಿಯ ಸುಭಾಷಿತ ಅಲ್ಲ... ಇದು ಪುರಾಣಗಳಲ್ಲಿ ಮೊದಲೇ ವೇದವ್ಯಾಸರು ಹೇಳಿದ ಸುಭಾಷಿತ... ಭರ್ತೃಹರಿ ತನ್ನ ಭಾಷೆಯನ್ನು ಬಳಸಿ ಹೇಳಿದ ಮಾತು ಅಷ್ಟೇ ..
ಭಾಗವತದಲ್ಲಿ ಬಂದ ಒಂದು ಮಾತು ಹೀಗಿದೆ :
ಯಸ್ತು ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂಗತಃ | ಉಭ‌ೌ ತೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ ||
ಒಬ್ಬ ಏನೂ ತಿಳುವಳಿಕೆಯಿಲ್ಲದವ ಇರುತ್ತಾನೆ  ಮತ್ತೊಬ್ಬ ಬುದ್ಧಿವಂತಿಕೆಯ ತುತ್ತ ತುದಿಗೇರಿದವನು, ಸಮಾಜದಲ್ಲಿ ಇವರಿಬ್ಬರೂ ಸುಖವಾಗಿರುತ್ತಾರೆ ಮಧ್ಯದಲ್ಲಿ  ಅರೆಬರೆ ತಿಳಿದು "ನಾವು ಎಲ್ಲ ತಿಳಿದವರು" ಎಂದು ತಿಳಿದುಕೊಂಡವರಿಂದಲೇ ಸಮಾಜಕ್ಕೆ ತೊಂದರೆ..
ಮೂಲತಃ ಇದು ಉಪನಿಷತ್ತಿನ ಮಾತು ಕಠೋಪನಿಷತ್ತಿನ ಒಂದು ಶ್ಲೋಕ ಹೀಗಿದೆ: 
ಅವಿದ್ಯಾಯಾಮಂತರೆ ವೆಷ್ಟ್ಯಮಾನಾಃ ಸ್ವಯಂ ಧೀರಾಃ ಪಂಡಿತಂಮನ್ಯಮಾನಾಃ |
ದಂದ್ರಮ್ಯಮಾಣಾಃ ಪರಿಯಂತಿ ಮೂಢಾಃ ಅಂಧೇನೈವ ನೀಯಮಾನಾ ಯಥಾಂಧಾಃ ||Kath.1-2-6||
ಸಮಾಜದ ಕುರಿತಾಗಿ ಉಪನಿಷತ್ ಕಾಲದ ಋಷಿಗಳು ಹೇಳಿದ ಮಾತಿದು... ತಾವೇ ಅವಿದ್ಯೆಯ ಬೇಲಿ  ಕಟ್ಟಿಕೊಂಡು ಅಜ್ಞಾನದ ಬೇಲಿಯೊಳಗೇ ಬದುಕುವವರು, ಆ ಅಜ್ಞಾನವನ್ನೇ ಮಹಾವಿಜ್ಞಾನ ಅಂತ ತಿಳಿದುಕೊಂಡು ತಾವೇ ಧೀರರು, ಪಂಡಿತರು ಎಂದು ವರ್ಣಿಸಿಕೊಂಡು, ಅಧಃಪಾತದ ದಾರಿಯಲ್ಲಿ ಸಾಗುತ್ತಾ ,ಕುರುಡರ ಬೆನ್ನು ಹತ್ತಿದ ಕುರುಡರಂತೆ ಯಾವ ಹಳ್ಳಕ್ಕೆ ಬೀಳುತ್ತಾರೋ ಗೊತ್ತಿಲ್ಲ...
ಬೈಬಲ್ ನಲ್ಲೂ ಈ ಮಾತು ಬಂದಿದೆ : If a blind man follows another blind man both of them will fall into a pit...
ಹೀಗೆ ಎಲ್ಲ ಕಡೆ ಬಂದ ಮಾತುಗಳನ್ನೇ ಭರ್ತೃಹರಿ ತನ್ನ ಸುಭಾಷಿತದಲ್ಲೂ ಸುಂದರವಾಗಿ ವರ್ಣಿಸಿದ್ದಾನೆ...
                                                                     ******
It is easy to mend the ways of an ignoramus. Suffices, if shown the right way, when in trouble, he would accept that this is the way shown by elders and knowledgeable ones and follow the path accordingly …
Likewise, it is also not difficult to mend the ways of the learned … They seek out solutions for their problems by themselves … It is thus that a duff and a fully learned one, remain happy …
The problem, however, is with the less learned, the half-baked scholars. As stated by Aśvat'thāma, सर्वोपि मन्यते लोके आत्मानं बुद्धिमत्तरम् - sarvōpi man'yatē lōke ātmāna bud'dhimattara each of us in this world considers himself / herself to be the wisest amongst all …
The less learned, who are under the delusion that they know everything, cannot be pleased by even Lord Brahmā himself … In the words of Confucious ‘He who knows not that he knows not, is a fool - shun him.’
Essentially, this is not a subhaśita by Bhartruhari at all … this subhaita has already been brought out by Vedavyāsaru in the puraās ... Bhartruhari merely conveys it in his own language here …
As cited in the Bhāgavata:   
यस्तु मूढतमो लोके यश्च  बुद्धेः परंगतः |
उभौ तौ सुखमेधेते  क्लिश्यत्यन्तरितो जनः ||
yastu mūhatamō lōkē yaśca bud'dhē paragata |
ubha‌̔au tau sukhamēdhētē kliśyatyantaritō jana ||
Happy are both, the ignorant and the fully wise; it is those in between, the ‘we know-all’ feeling semi-learned, that pose problems to the society at large …
Primarily this thought is from the Upanishad; a shloka from Kathopanishad is as under -
अविद्यायामन्तरे वेष्ट्यमानाः स्वयं धीराः पण्डितंमन्यमानाः
दन्द्रम्यमाणाः परियन्ति मूढा अन्धेनैव नीयमाना यथान्धाः 1-2-6॥
avidyāyāantare vēṣṭyamānā svaya dhīrā paṇḍita man'yamānā | 
dandramyamā
ā pariyanti mūhā andhēnaiva nīyamānā yathāndhā ||1-2-6 ||
These are the words of our sages, concerning the society, from the Upanishad times … Those who ring fence themselves in imprudence and wallow in ignorance, hold the same ignorance as highly specialized knowledge, complacently consider themselves to be wise, publicise this as their scholarliness and create a path for their downfall, like a blind man riding the back of another blind one, never know into which pit they would land .. the Bible too states, When a blind man follows another blind one, both would fall into a pit...’   
In this way, what is universally stated, Bhartruhari captures the thought in his own words, in this subhaśita.

No comments:

Post a Comment