Monday, January 11, 2016

Neeti Shataka Shloka 04

ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್ ಪಿಬೇಚ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ |
ಕದಾಚಿದಪಿ ಪರ್ಯಟನ್ ಶಶವಿಷಾಣಮಾಸಾದಯೇತ್ ನ ತು ಪ್ರತಿನಿವಿಷ್ಟ ಮೂರ್ಖಜನ ಚಿತ್ತಮಾರಾಧಯೇತ್ || 4 ||
लभेत सिकतासु तैलमपि यत्नतः पीडयन् पिबेच्च मृगतृष्णिकासु सलिलं पिपासार्दितः|
कदाचिदपि पर्यटन् शशविषाणमासादयेत् तु प्रतिनिविष्ट मूर्खजन चित्तमाराधयेत्||4||
 labhēta sikatāsu tailamapi yatnataayan pibēcca. Mr̥gatr̥ṣṇikāsu salila pipāsārdita |
kadācidapi paryaan śaśaviāamāsādayēt na tu pratiniviṣṭa mūrkhajana cittamārādhayēt || 4 ||

ಈ ಶ್ಲೋಕದಲ್ಲೂ ಭರ್ತೃಹರಿ ಅಸಂಭವವಾದ ಉಪಮಾನಗಳ ಮೂಲಕ ಮೂರ್ಖರನ್ನು ತಿದ್ದಲಿಕ್ಕಾಗುವುದಿಲ್ಲಾ ಎಂಬ ತೀರ್ಮಾನಕ್ಕೆ ಬರುತ್ತಾನೆ...
ಪ್ರಯತ್ನಪಟ್ಟು ಉಸುಕ (ಮರಳ)ನ್ನಾದರೂ ಹಿಂಡಿ ಎಣ್ಣೆಯನ್ನು ತೆಗೆಯಬಹುದೇನೋ...
ಬಾಯಾರಿ ನೀರಿಗಾಗಿ ಅಲೆದಾಡುವಾಗ  ಮೃಗಜಲದಿಂದ  (ಮರುಭೂಮಿಯಲ್ಲಿ ಕಣ್ಣಿಗೆ ಗೋಚರಿಸುವ ಭ್ರಮಾದೃಶ್ಯ, ಮರೀಚಿಕೆಯಿಂದ) ಲಾದರೂ ನೀರನ್ನು ಕುಡಿಯಬಹುದೇನೋ...
ಮೊಲಕ್ಕೆ ಕೋಡು ಉಂಟೇ ? ಹುಡುಕುತ್ತಾ ತಿರುಗಾಡುತ್ತಿರುವಾಗ ಒಂದು ದಿನ ಕೋಡಿದ್ದ ಮೊಲ ಕೂಡ ಕಂಡೀತೇನೋ....
ಮೊಲಕ್ಕೆ ಕೋಡು ಬಂದೀತು
ಮೃಗತೃಷ್ಣಿಕಾದಿಂದ ನೀರು ಬಂದೀತು
ಉಸುಕಿನಿಂದ ಎಣ್ಣೆ ಬಂದೀತು
ಈ ಎಲ್ಲ ಅಸಂಭವಗಳಾದರೂ ಸಂಭವಿಸಿಯಾವು ಆದರೆ ಮೂರ್ಖಜನರನ್ನು ತಿದ್ದುವುದು ಮಾತ್ರ ಅಸಾಧ್ಯವೇ ಸರಿ.. 
ಭರ್ತೃಹರಿಯ ಈ ಮಾತನ್ನೇ ಹೋಲುವ ಸರ್ವಜ್ಞನ ಒಂದು ನುಡಿ ಹೀಗಿದೆ :
" ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರೆ, ಗೋರ್ಕಲ್ಲು ಮೇಲೆ ಮಳೆಸುರಿದಂತೆ " ಎಂಬಂತಾಗುತ್ತದೆ ಮೂರ್ಖರಿಗೆ ಮಾಡುವ ಉಪದೇಶ...
ಭರ್ತೃಹರಿಯ ಕಾಲದಿಂದ ಹಿಡಿದು (ಭರ್ತೃಹರಿ 4 ಅಥವಾ 5ನೇ ಶತಮಾನದಲ್ಲಿದ್ದವ  ಅಂತ ಉಹಿಸುತ್ತಾರೆ) ಇಂದಿನವರೆಗೂ ಇಂತಹ ಮೂರ್ಖರ ಸಾಮ್ರಾಜ್ಯ ಶಾಶ್ವತವಾಗಿಯೇ ಈ ಭುವಿಯಲ್ಲಿದೆ. ಅಂದರೆ ಎಲ್ಲ ಕಾಲದಲ್ಲೂ ಮೂರ್ಖರು ಇದ್ದೇ ಇರುತ್ತಾರೆ... ಅವರ ಸಂಖ್ಯೆಯೇ ಹೆಚ್ವು ಅನ್ನುವುದನ್ನು ಒತ್ತುಕೊಟ್ಟು ಹೇಳಿದ ಶ್ಲೋಕವಿದು...
                                                         ****
In this shloka, through incredulous comparisons, Bhartruhari concludes that it is impossible to turn around obdurate fools …

On striving, one may be able to wring out oil from sand … for a wayfarer in a desert, it might be possible to slake his thirst from a mirage …

Ever seen a rabbit with horns? On wandering the earth, he may be able to discover a rabbit with horns too …

A rabbit with horns
Moisture from mirage
Oil from sand

These impossibilities might turn possible but convincing a fool is certainly impossible …

Bhartruhari’s words remind us of similar sense echoed in Sarvajna’s wisdom filled verses …
mūrkhage bud'dhiyanu nūrkāla hēidare, gōrkallu mēle maLesuridante” (Wise counsel drilled hundred times in a fool’s ears, is like rainfall over a boulder).

Implies that right from Bhartruhari’s times (it is estimated that he lived in the 4thand/ or 5th centuries CE), the reign of fools has been preserved intact on this earth!! Fools have pervaded across all time periods … They populate our world to in greater count …

No comments:

Post a Comment