Sunday, January 10, 2016

Invocation

 ದಿಕ್ಕಾಲಾದ್ಯನವಚ್ಛಿನ್ನಾನಂತ ಚಿನ್ಮಾತ್ರ ಮೂರ್ತಯೇ | ಸ್ವಾನುಭೂತ್ಯೇಕಮಾನಾಯ ನಮಃ ಶಾಂತಾಯ ತೇಜಸೇ||
 दिक्कालाद्यनवच्छिन्नानंत चिन्मात्र मूर्तये| स्वानुभूत्येकमानाय नमः शान्ताय तेजसे||
 dikkālādyanavacchinnānanta cinmātra mūrtayē | svānubhūtyēkamānāya namaḥ śāntāya tējasē||

ಮಹಾಭಾಷ್ಯಕಾರ ಪತಂಜಲಿ ಹೇಳಿದ, ಯಾವುದೇ ಒಂದು ಗ್ರಂಥಾರಂಭದಲ್ಲಿ ಮಂಗಲಾಚರಣೆ ಮಾಡಬೇಕು, ಅಂದರೆ ಭಗವಂತನನ್ನು ನೆನೆಯಬೇಕು, ಆಗ ಗ್ರಂಥ ರಚನೆ ಯಾವ ಅಡಚಣೆಯಿಲ್ಲದೆ ಮುಂದುವರಿಯುತ್ತಾ ಪರಿಸಮಾಪ್ತವಾಗುತ್ತದೆ. "ಮಂಗಲಾದೀನಿ, ಮಂಗಲಮಧ್ಯಾನಿ, ಮಂಗಲಾಂತಾನಿ" ಎಂಬಂತೆ ಒಂದು ಗ್ರಂಥದ ಪ್ರಾರಂಭದಲ್ಲಿ ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಮಂಗಲದಲ್ಲೇ ಗ್ರಂಥ ಸಮಾಪ್ತಿಯಾಗಲಿ ಎಂಬ ಆಶಯ ಹಿಂದಿನವರದು...
ಅಷ್ಟೇ ಅಲ್ಲ ಆ ಗ್ರಂಥವನ್ನು ಓದುವವರಿಗೂ ಕೂಡ ಇದು ಮಂಗಲಪ್ರದವಾಗಲಿ ಎಂಬ ಕಳಕಳಿ. ಹಿಂದಿನವರು ಹಾಕಿಕೊಟ್ಟ ಕ್ರಮದಲ್ಲೇ  ಭರ್ತೃಹರಿ ತನ್ನ ಶತಕತ್ರಯದ ಆರಂಭದಲ್ಲಿ ಮಂಗಳಾಚರಣೆ ಮಾಡಿದ ಶ್ಲೋಕವಿದು.

ಮಂಗಲಾಚರಣೆಯೂ ಮೂರು ತರ. ದಂಡಿ ಹೇಳಿದ ಮಾತು  "ಆಶೀಃ ನಮಸ್ಕ್ರಿಯಾ ವಸ್ತುನಿರ್ದೇಶೋವಾ"... ನಮಸ್ಕಾರ ರೂಪ, ಆಶೀರ್ವಾದ ರೂಪ ಮತ್ತು ಒಂದು ವಸ್ತುವನ್ನು ಕುರಿತಾದ, ಹೀಗೆ ಮೂರು ತರದ ಮಂಗಲಾಚರಣೆ ಹಿಂದಿನಿಂದ ಬಳಕೆಗೆ ಬಂತು...
ಭರ್ತೃಹರಿ ಇಲ್ಲಿ ನಮಸ್ಕಾರ ರೂಪದ ಮಂಗಲಾಚರಣೆ ಮಾಡಿದ್ದಾನೆ....

ಭರ್ತೃಹರಿ ಮೂರು ಶತಕಗಳನ್ನು ರಚಿಸಿದ - ನೀತಿ ಶತಕ, ಶೃಂಗಾರ ಶತಕ ಮತ್ತು ವೈರಾಗ್ಯ ಶತಕ. ತನ್ನ ಮೂರೂ ಶತಕಗಳಿಗೆ ಮಂಗಲಾಚರಣೆ ಪದ್ಯವಾಗಿ ಈ ಶ್ಲೋಕ ಬಂದಿದೆ...

ಭಗವಂತನಿಗೆ ದಿಕ್ಕಿನ, ಕಾಲದ  ಅವಚ್ಛೇದ(ವಿಭಾಗ) ಇಲ್ಲ . ಅಂದರೆ ಮೂರೂ ಕಾಲಗಳಲ್ಲಿ ಇರುವವನು, ಅನಂತವಾದ ವಸ್ತು , ಅಜ್ಞಾನದ ಸ್ಪರ್ಶವೇ ಇಲ್ಲದ ಬೆಳಕಿನ ಸ್ವರೂಪ.
ಕೇವಲ ನಮ್ಮ ಜ್ಞಾನಾನಂದ ಸ್ವರೂಪಕ್ಕೆ ಮಾತ್ರ ಗೋಚರವಾಗುವ ಚಿನ್ಮಯ ಮೂರ್ತಿ ಭಗವಂತ...
ನಮಗೆ ನಮ್ಮ ಸ್ವರೂಪದ ಅನುಭವವಾದಾಗ ಮಾತ್ರ ನಮ್ಮ ಅನುಭವಕ್ಕೆ ಗೋಚರವಾಗುವ ವಸ್ತು , ಬೆಳಕಿನ ಪುಂಜವಾದ ಆದರೂ ತಂಪಾದ
ಶಾಂತವಾದ (ಶಂ - ಆನಂದ, ಅಂತ - ತುತ್ತ ತುದಿ) - ಆನಂದದ ತುತ್ತ ತುದಿಯಾದ, ಅನಂತವಾದಜ್ಞಾನಾನಂದ - ತೇಜೋಮಯವಾದ  ಭಗವಂತನಿಗೆ ನಮಸ್ಕಾರ ಎಂದು ಸುಂದರವಾದ ಮಂಗಲಾಚರಣೆಯೊಂದಿಗೆ ತನ್ನ ಶತಕತ್ರಯವನ್ನು ಭರ್ತೃಹರಿ ಪ್ರಾರಂಭಿಸುತ್ತಾನೆ...
                                      ****

The great commentator Patanjali has stated that an auspicious invocation should be the precursor to any sacred composition or text, as a dedicated recounting of God. This would help in the unhindered progression of the composition, as well as in its harmonious completion. Just as it is said, "मंगलादीनि, मंगलमध्यानि, मंगलांतानि - maṅgalādīni, maṅgalamadhyāni, maṅgalāntāni," our ancients always desired the auspicious commencement, continuation and culmination of any work.
Not just that, they also were eager that those who read the work should be ushered into auspiciousness. It is in the context of these guidelines laid down by the ancients, that Bhartruhari has presented, this auspicious invocation to the śatakatraya (trilogy of shatakas or verse hundreds).
Such incantations essentially are of three types. In the words of Daṇḍi, आशीः नमस्क्रिया वस्तुनिर्देशोवा- āśīḥ namaskriyā vastunirdēśōvā,” … the obeisance form, blessings form or pertaining to an object. These were the three types that came into vogue from earlier times …
Here Bhartruhari adopts the obeisance form of auspicious incantation …   
Bhatruhari composed three śatakas (compositions of hundred verses, each) - Nīti Śataka, Śr̥ṅgāra Śataka and Vairāgya Śataka. This shloka forms the invocation for each of these three śatakas.
God has no divisions in respect of direction or time. Which means he exists across all three epochs (past, present and future), is infinite in all dimensions and a light form that is untouched by ignorance.
God is purely accessible to our innate blissful awareness, in the form pristine unalloyed intellect …
It is only when we experience our own true nature does He become the object of our experience, appearing as a cool streak of light.
Bhartruhari here pays obeisance to one Who is Śānta - Śaṁ + anta i.e. ultimate form of blissfulness or the infinite peak of happiness, joyful awareness, unending aura of light!

No comments:

Post a Comment