Monday, January 11, 2016

Neeti Shataka Shloka 03

ಪ್ರಸಹ್ಯ ಮಣಿಮುದ್ಧರೇನ್ಮಕರ ವಕ್ತ್ರ ದಂಷ್ಟ್ರಾಂತರಾತ್ ಸಮುದ್ರಮಪಿ ಸಂತರೇತ್ಪ್ರಚಲ ದೂರ್ಮಿಮಾಲಾಕುಲಮ್
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ನ ತು ಪ್ರತಿನಿವಿಷ್ಟಮೂರ್ಖಜನ ಚಿತ್ತಮಾರಾಧಯೇತ್||3||
प्रसह्य मणिमुद्धरेन्मकर वक्त्र दंष्ट्रान्तरात् समुद्रमपि सन्तरेत्प्रचल दुर्मिमालाकुलम्|
भुजंगमपि कोपितं शिरसि पुष्पवद्धारयेत् तु प्रतिनिविष्टमूर्खजन चित्तमाराधयेत् ||3|| 
prasahya maimud'dharēnmakara vaktra danṣṭrāntarāt samudramapi santarētpracala dūrmimālākulam|
bhujagamapi kōpita śirasi pupavad'dhārayēt na tu pratiniviṣṭamūrkhajana cittamārādhayēt ||3||


ಹಿಂದಿನ ಶ್ಲೋಕದಲ್ಲಿ ಹೇಳಿದಂತೆಸಮಾಜದಲ್ಲಿ ಮೂರ್ಖರೇ ಹೆಚ್ಚು ತುಂಬಿರುವಾಗ, ಯಾವ ಸುಭಾಷಿತದಿಂದಲೂ ಅಂಥ ಮೂರ್ಖರನ್ನು ತಿದ್ದುವುದು ಕಷ್ಟಸಾಧ್ಯ ಅಂತ ಹೇಳಿ ಮತ್ತೆ ಮುಂದಿನ ಶ್ಲೋಕದಲ್ಲಿ ಅದು ಅಸಾಧ್ಯ ಅನ್ನುವ ತೀರ್ಮಾನಕ್ಕೆ ಬರುತ್ತಾನೆ ಭರ್ತೃಹರಿ....

ಮಕರ ಅಂದರೆ ಮೊಸಳೆ, ಸಂಸ್ಕೃತದಲ್ಲಿ ಇದಕ್ಕೆ "ಶಿಶುಮಾರ" ಅಂತಲೂ ಕರೆಯುತ್ತಾರೆ... ಚಿಕ್ಕ ಮಕ್ಕಳನ್ನು ಕೊಲ್ಲುವ ಪ್ರಾಣಿ.. ನೀರಿನಲ್ಲಿ ಚಿಕ್ಕ ಮಕ್ಕಳು ಸಿಕ್ಕರೆ ಹಿಡಿದು ನುಂಗಿ ಬಿಡುವ ಪ್ರಾಣಿಯಾದ್ದರಿಂದ ಇದನ್ನು ಶಿಶುಮಾರ ಅಂತಲೂ 
ಕರೆಯುತ್ತಾರೆ...

ಒಂದು ಮೊಸಳೆಯ ತೆರದ ಕಟವಾಯಿ, ಅದರ ಒಳಗೆ ಇರುವಂತ ಚೂಪಾದ ಕೋರೆ ಹಲ್ಲುಗಳ ನಡುವೆ ಸಿಕ್ಕಿಕೊಂಡ ಒಂದು ಮಣಿ ಇದೆ (ಮೊಸಳೆ ಯಾವುದೋ ಹಾವನ್ನು ನುಂಗಿತ್ತು, ಆ ಹಾವಿನ ಹೆಡೆಯಲ್ಲಿದ್ದ ಮಣಿ ಸಿಕ್ಕಿಕೊಂಡಿದೆ ಅಂತ ಇಟ್ಟುಕೊಳ್ಳೋಣ) ಒಂದು ವೇಳೆ ಬಹಳ ಕಷ್ಟಪಟ್ಟಾದರೂ ಸರಿ, ಆ ಮೊಸಳೆಯ ಬಾಯಿಯಲ್ಲಿ ಹಲ್ಲುಗಳ ನಡುವೆ ಸಿಕ್ಕಿಕೊಂಡ ಮಣಿಯನ್ನಾದರೂ ಕೂಡ ಹೊರತೆಗೆಯಬಹುದು...
ಅದು ಅಸಾಧ್ಯ ಅಲ್ಲ ಕಷ್ಟ ಸಾಧ್ಯ...

ಹಾಗೇ, ದೊಡ್ಡ ದೊಡ್ಡ 'ಸುನಾಮಿ' ಯಂಥ ತೆರೆಗಳಿಂದ ಅಬ್ಬರಿಸುತ್ತಿರುವ ಸಮುದ್ರವನ್ನಾದರೂ ದಾಟಿಬಿಡಬಹುದು...

ಹಾವು ಕಿವಿಲ್ಲದ ಪ್ರಾಣಿ, ಅದು ನಮ್ಮ ಮನಸ್ಸಿನ ತರಂಗಗಳಿಗೆ ಸ್ಪಂದಿಸುವ ಪ್ರಾಣಿ... ಮನುಷ್ಯರು ಕಷ್ಟಪಟ್ಟು ಅಭ್ಯಾಸ ಮಾಡುವ "ಮೈಂಡ್ ರೀಡಿಂಗ್" ಅನ್ನೋದು ಸಹಜವಾಗಿ ಇರುವ ಪ್ರಾಣಿ..

ಅದಕ್ಕೆ ನಾವು  ಅಪಾಯ ಮಾಡುವುದು ಮನವರಿಕೆಯಾದರೆ ಸಿಟ್ಟಿಗೆದ್ದು ಹೆಡೆಯರಳಿಸಿ ಬುಸುಗುಡುತ್ತಾ ಮೈಮೇಲೆ ಎರಗುವ ಪ್ರಾಣಿ ..

ಅಂಥ ಸಿಟ್ಟಿಗೆದ್ದು ಹೆಡೆಯರಳಿಸಿದ ಹಾವನ್ನೂ ಕೂಡ ಹೂವಿನಂತೆ ತಲೆಯಲ್ಲಿ ಹೊತ್ತುಕೊಂಡು ತಿರುಗಬಹುದು...
ಇದೂ ಕೂಡ ಅಸಾಧ್ಯವಲ್ಲ ಕಷ್ಟ ಸಾಧ್ಯ.. ಮಣಿಮಂತ್ರೌಷಧ ಅನ್ನುವ ಮಂತ್ರದಿಂದ ಹಾವನ್ನೂ ಕೂಡ ಮಣಿಸಬಹುದು.. "ಜಾಂಗಲಿಕರು" ಅನ್ನುವ ಹಾವನ್ನು ಪಳಗಿಸು ಕಾಡು ಜನರಿದ್ದರು, ಹಾವು ಕಚ್ಚಿದರೂ ವಿಷ ಏರದಂತೆ ಮಾಡುವ 
ಮಾಂತ್ರಿಕರಿವರು.

ಹೀಗೆ ಮೇಲೆ ಹೇಳಿದ ಮೂರೂ ಸಂಗತಿಗಳೂ ಕಷ್ಟ ಸಾಧ್ಯ.. ಆದರೆ ತನ್ನ ಅಭಿಪ್ರಾಯವೇ ಸರಿ ಎಂದು ಹಠ ಹಿಡಿಯುವ, ದುರಾಗ್ರಹಕ್ಕೆ ಒಳಗಾದ, ಭ್ರಮೆಯಲ್ಲೇ ಬದುಕುವ ಮೂರ್ಖಜನರ ಚಿತ್ತವನ್ನು ಸಂತೈಸುವುದು ಮಾತ್ರ ಅಸಾಧ್ಯ...
ಹೀಗೆ ಮೂರ್ಖರನ್ನು ತಿದ್ದುವುದು ಮಾತ್ರ  ಸಾಧ್ಯವೇ ಇಲ್ಲ ಅನ್ನುತ್ತಾನೆ ಭರ್ತೃಹರಿ...
                                                                      ****                 
As mentioned in the previous śloka, the society has its measure of fools; it is a difficult task to mend their ways through any subhāita; having said so, Bhartruhari, in this succeeding śloka, states that it is impossible to correct their ways …   

The crocodile is also called ‘śiśumāra’ in Sanskrit, which means, an animal that kills children… If children are found around its watery habitat, it swallows them and as such is known as śiśumāra …

From the wide open jaws of a crocodile, entangled between its sharp and crooked teeth, if one spots a gem (we may presume that such a gem got deposited there, as the remnant of a snake swallowed by the crocodile), it may be possible to retrieve the gem, even if it proves challenging, from the menacing jaws of the crocodile … This is a difficult but not impossible task …

In just the same way, it might also be possible to tide over a sea swelled by raging tsunamis …

A snake is an earless animal but is capable of appreciating our mind vibes … what humans may achieve through diligent practice, ‘mind reading,’ the snake can do it naturally … When such an animal senses danger from us, it spreads its hood and prepares to strike us with a hiss … It is also possible to adorn on one’s crown, as a garland of flowers, such an agitated snake … Even this, is not impossible but merely a difficult task …

Using an incantation called ‘maimantrauadha’ it would be possible to tame a snake …  There used to be forest dwelling tribe called ‘galika’ which was capable to preventing a snake bite toxin from spreading through the body, chanting certain mantras

As such, all the three types illustrated above are difficult but performable … however, it would be impossible to please, self-opinionated fools, who reel under the delusion that their view is the only right one.  

Thus it is not possible to mend the ways of the imprudent, says Bhartruhari …

No comments:

Post a Comment