Monday, January 11, 2016

Neeti Shataka Shloka 05

ವ್ಯಾಲಂ ಬಾಲಮೃಣಾಲತಂತುಭಿರಸೌ ರೋದ್ಧುಂ ಸಮಜ್ಜೃಂಭತೇ ಛೇತ್ತುಂ ವಜ್ರಮಣಿಂ ಶಿರೀಷಕುಸುಮ ಪ್ರಾಂತೇನ ಸಂನಹ್ಯತಿ
ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಂಬುಧೇರೀಹತೇ ಮೂರ್ಖಾನ್ಯಃ ಪ್ರತಿನೇತು ಮಿಚ್ಛತಿ ಬಲಾತ್ಸೂಕ್ತೈಃ ಸುಧಾಸ್ಯಂದಿಭಿಃ || 5 ||
व्यालं बालमृणालतन्तुभिरसौ रोद्धुं समज्जृंभते छेत्तुं वज्रमणिंशिरीषकुसुम प्रांतेन संनह्यते
माधुर्यं मधुबिंदुना रचयितुं क्षारांबुधेरीहते मूर्खान्यः प्रतिनेतु मिच्छति बलातसुक्तैः सुधास्यन्दिभिः||5||
vyāla bālamr̥ālatantubhirasau rōd'dhu samajjr̥mbhatē chēttu vajramai śirīakusuma prāntēna sannahyati |
Mādhurya madhubindunā racayitu kārāmbudhērīhatē mūrkhān'ya pratinētu micchati balātsūktai sudhāsyandibhi ||5||


ಒಂದು ವ್ಯಾಳ ಇದೆ. ವ್ಯಾಳ ಅಂದರೆ ದುಷ್ಟಗಜ, ಮಾವುತನ ಯಾವ ನಿಯಂತ್ರಣಕ್ಕೂ ಸಿಗದಂತ ಮತ್ತೇರಿದ ಆನೆ... ಆನೆಗಳು ಮದಭರಿತವಾದಾಗ ಅವುಗಳ ಹಣೆಯಿಂದ ನೀರು ಇಳಿಯಲಿಕ್ಕೆ ಶುರುವಾಗುತ್ತದೆ...

ಆಗ ಪಳಗಿದ ಮಾವುತರೂ ಕೂಡ ಅವುಗಳ ಹತ್ತಿರ ಹೋಗುವುದಿಲ್ಲ... ಅದನ್ನು ಕಟ್ಟಿಹಾಕಲಿಕ್ಕೆ ಹೋದರೆ ಯಾರನ್ನೂ ಬಿಡುವುದಿಲ್ಲ ಕೊಂದೇ ಹಾಕುತ್ತದೆ..

ಅಂತಹ ಮದ್ದಾನೆಯನ್ನು ನವುರಾದ ಕಮಲದ ನಾಳದಿಂದ ಕಟ್ಟಿ ಹಾಕಲಿಕ್ಕೆ ಪ್ರಯತ್ನ ಪಡುವವನು ಹೇಗೋ ಹಾಗೆ 
ಮೂರ್ಖರಿಗೆ ಬುದ್ಧಿ ಹೇಳ ಹೊರಟವರ ಪ್ರಯತ್ನ... 

ಅತ್ಯಂತ ಕಠಿಣವಾದ ವಜ್ರವನ್ನು ಕೋಮಲವಾದ ಹೂವಿನ ಎಸಳಿನಿಂದ (ಶಿರೀಷಕುಸುಮ ಅಂದರೆ ಒಂದು ಹೂವಿನ ವಿಶೇಷ .. ಬಾಗೇಮರದ ಹೂವು ಅಂತಾರೆ) ತುಂಡರಿಸುವ ಪ್ರಯತ್ನ ಯಾರಾದರೂ ಮಾಡಿದರೆ ಹೇಗೋ ಹಾಗೆ ಮೂರ್ಖರಿಗೆ ಬುದ್ಧಿವಾದ ಹೇಳಲಿಕ್ಕೆ ಹೋದವರ ಕಥೆ...

ಉಪ್ಪು ನೀರಿನ ಸಮುದ್ರ... ಅದನ್ನು ಸಿಹಿ ಮಾಡಬೇಕು ಅಂತ ಒಂದು ಬಿಂದು ಜೇನಿನಿಂದ ಅಥವಾ ಸಕ್ಕರೆ ಪಾಕದಿಂದ ಇಡೀ ಸಮುದ್ರವನ್ನು ಸಹಿ ಮಾಡ ಹೊರಟವನ ಪ್ರಯತ್ನದಂತೆ ಆದೀತು ಮೂರ್ಖರನ್ನು  ಸಿಹಿ (ಒಳ್ಳೆಯ)  ಮಾತಿನಿಂದ ತಿದ್ದ ಹೊರಟವರ ಪಾಡು...

ಮೊದಲಿಗೆ ಹೀಗೆಲ್ಲ ಪ್ರಯತ್ನ ಮಾಡುವವರೇ ಮೂರ್ಖರು, ಮತ್ತೆ ಸುಭಾಷಿತದ ಹಿತನುಡಿಗಳಿಂದ ಮೂರ್ಖರಿಗೆ ಬುದ್ಧಿವಾದ ಹೇಳಿ ತಿದ್ದಲು ಹೊರಟವರು ಶತಮೂರ್ಖರು...

ಕನ್ನಡದಲ್ಲಿ ಒಂದು ಗಾದೆ ಮಾತಿದೆ :
"ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ" ಅಂತ... ಹಾಗಾದೀತು ಮೂರ್ಖರ ಮುಂದೆ ಹಿತೋಪದೇಶ....
                                                             ****
There is a ‘vyāla’ i.e., a musth or rogue elephant, that cannot be controlled by a mahout … When in this condition, water drips from its forehead …  

In such state even seasoned mahouts refrain from going near them … The elephant does not permit tethering, trying to chain it can prove fatal to anyone attempting it …

One who tries to counsel a fool is actually doing nothing more than trying to chain such a rogue elephant using the tender stalk of a lotus …

The attempt to reform a fool is also like the saga of those trying to polish hard diamond using the flowers of the Lebbeck tree as the flowers look abrasive!

It is also akin to infusing a drop of honey or a dash of sugar syrup to the salty waters of the sea, in order to sweeten it – the act of reforming a fool through sweet talk.

In the first place those who make such attempts are themselves fools and those who think that good counsel from a subhāita is all that is needed to reform a fool are celebrated fools themselves …

There is an idiom in Kannada for this –
ana munde kinnari bārisida hāge - Playing the fiddle in a buffalo’s presence’ … is presenting good advice to a fool …

No comments:

Post a Comment