ಕೃಮಿಕುಲಚಿತಂ ಲಾಲಾಕ್ಲಿನ್ನಂ ವಿಗಂಧಿ ಜುಗುಪ್ಸಿತಂ ನಿರುಪಮರಸ
ಪ್ರೀತ್ಯಾ ಖಾದನ್ನರಾಸ್ಥಿ ನಿರಾಮಿಷಮ್ |
ಸುರಪತಿಮತಿ ಶ್ವಾ ಪಾರ್ಶ್ವ ಸ್ಥಂ ವಿಲೋಕ್ಯ ನ ಶಂಕತೇ ನ ಹಿ ಗಣಯತಿ
ಕ್ಷುದ್ರೋ ಜಂತುಃ ಪರಿಗ್ರಹ ಫಲ್ಗುತಾಮ್ ||8||
कृमिकुलचितं लालाक्लिन्नं
विगंधि जुगुप्सितं निरुपमरस प्रीत्या खादन्नरास्थि निरामिषम्|
सुरपतिमती
श्वा पार्श्व स्थं विलोक्य न शंकते न हि गणयति क्षुद्रो जन्तुः परिग्रह फल्गुताम्||8||
kr̥mikulacitaṁ
lālāklinnaṁ vigandhi jugupsitaṁ
nirupamarasa prītyā khādannarāsthi nirāmiṣam |
surapatimati śvā pārśva sthaṁ
vilōkya na śaṅkatē na hi gaṇayati
kṣudrō
jantuḥ
parigraha phalgutām ||8||
ಸಮಾಜದಲ್ಲಿ ಕೆಲವು ಮೂರ್ಖರಿರುತ್ತಾರೆ ಅವರ ಬಾಳು ನಾಯಿ ಬಾಳಿಗಿಂತ ಕಡೆ ಆದರೆ ತಾವು ದೊಡ್ಡ ಸಂಭಾವಿತರು ಅನ್ನುವ ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಅಂಥಹವರ ಬದುಕನ್ನು ಭರ್ತೃಹರಿ ವರ್ಣಿಸಿದ ಶ್ಲೋಕವಿದು...
ಒಂದು ನಾಯಿಯ ದೃಷ್ಟಾಂತವನ್ನು ಕೊಟ್ಟು ಹೇಳುತ್ತಾನೆ...
ಒಂದು ನಾಯಿ ಇದೆ. ಅದು ಒಂದು ಪ್ರಾಣಿಯ ಎಲುಬನ್ನು ಕಚ್ಚಿಕೊಂಡು ಕೂತಿದೆ... ಆ ಅಸ್ಥಿಗೆ ಯಾವುದೇ ತುಣುಕು ಮಾಂಸವೂ ಅಂಟಿಕೊಂಡಿಲ್ಲ , ಯಾವುದೇ ರಸವೂ ಇಲ್ಲ , ಅತ್ಯಂತ ಹಳೆಯದಾದ ಎಲುಬು, ಅದರ ಮೇಲೆ ಕ್ರಿಮಿಕೀಟಗಳು ಹರಿದಾಡುತ್ತಿವೆ, ಆ ಅಸ್ಥಿಯನ್ನೇ ಜಗಿದು ಜಗಿದು ಜೊಲ್ಲಿನಿಂದ ಒದ್ದೆಯಾಗಿದೆ, "ವಿಗಂಧಿ" ದುರ್ವಾಸನೆಯಿಂದ ಕೂಡಿದ ಅಸ್ಥಿ...
(ಆಚಾರ್ಯರ ಅಭಿಪ್ರಾಯದಂತೆ "ವಿಗಂಧಿ" ಅಂತ ವ್ಯಾಕರಣ ಪ್ರಕಾರ ರೂಪ ಆಗುವುದಿಲ್ಲ , ತಪ್ಪು ವ್ಯಾಕರಣ ಪ್ರಯೋಗ ಮಾಡಿದ್ದಾನೆ ಭರ್ತೃಹರಿ ಅನ್ನುತ್ತಾರೆ. ಗಂಧ ಇದ್ದದ್ದು ಗಂಧಿ ಆಗುವುದು ಉತ್, ಪೂತಿ, ಸು, ಸುರಭಿ ಅನ್ನುವ ಉಪಸರ್ಗಗಳು ಸೇರಿದಾಗ ಮಾತ್ರ ... ಉತ್ಗಂಧಿ, ಪೂತಿಗಂಧಿ, ಸುಗಂಧಿ, ಸುರಭಿಗಂಧಿ ಹೀಗೆ ನಾಲ್ಕು ಶಬ್ದಗಳು ಆಗುತ್ತವೆ...)
ಚೆನ್ನಾಗಿ ವ್ಯಾಕರಣ ಗೊತ್ತಿದ್ದವರು ವ್ಯಾಕರಣವನ್ನು ಮುರಿಯ ಬಲ್ಲರು..
ಭರ್ತೃಹರಿ "ವಾಕ್ಯಪದೀಯ" ಬರೆದಂತಹ ಮಹಾದೊಡ್ಡ ವೈಯಾಕರಣ... ಆದರೂ ಮೇಲು ನೋಟಕ್ಕೆ ವಿಗಂಧಿ ಶಬ್ದ ಅಷ್ಟು ಸರಿಯಾದ ಪ್ರಯೋಗ ಅಲ್ಲ "ವಿಗಂಧಂ" ಅಂತಲೇ ಹೇಳಬೇಕು ಎಂಬುದು ಆಚಾರ್ಯರ ಅಭಿಪ್ರಾಯ)
ದುರ್ವಾಸನೆಯಿಂದ ನೋಡಲೂ ಜಿಗುಪ್ಸೆ ತರುವಂತಿರುವ ಅದು ಎಂಥಹ ಎಲುಬು ?... "ಖರಾಸ್ಥಿಃ" ಕತ್ತೆಯ ಎಲುಬು ಅಥವಾ ಕರ್ಕಶವಾದ ಎಂದೋ ಸತ್ತ ಪ್ರಾಣಿಯ ಹಳೆಯ ಎಲುಬುನ್ನೇ ಮಹಾರಸವತ್ತಾದ ಪದಾರ್ಥ ಅನ್ನುವಂತೆ ಜಗಿಯುತ್ತಾ ಇದೆ ಆ ನಾಯಿ.
ನಾಯಿಗೆ ಆ ಎಲುಬನ್ನು ಜಗಿಯುವಲ್ಲಿ ಎಷ್ಟು ಏಕಾಗ್ರತೆ ಅಂದರೆ, ಪಕ್ಕದಲ್ಲೇ ಸಾಕ್ಷಾತ್ ದೇವತೆಗಳ ಒಡೆಯ ಇಂದ್ರನೇ ಬಂದು ನಿಂತರೂ ಲಕ್ಷಿಸದೆ, ನಾಚಿಕೆಯಿಲ್ಲದೆ, ನಿಶ್ಯಂಕೆಯಿಂದ ಜಗಿಯುತ್ತಾ ಇರುತ್ತದೆ.. ಅದು ನಾಯಿಯ ಮೂರ್ಖತ್ವ . ಬಹಳ ಜನ ಮನುಷ್ಯರೂ ಹೀಗೆ ಇರುತ್ತಾರೆ ಅನ್ನುತ್ತಾನೆ ಭರ್ತೃಹರಿ.
ಕ್ಷುದ್ರರಾದ ಮನುಷ್ಯರು ನೀರಸವಾದದನ್ನು ಪಡೆದು ಅದೇ ಮಹಾರಸ, ಮಹಾರುಚಿ, ದೊಡ್ಡ ಸಂಗತಿ ಎಂದು ಆಸ್ವಾದಿಸುತ್ತ ಸಂತೋಷ ಪಡುತ್ತಾರೆ. ಜೀವನದ ಮಹತ್ತಾದ ಸಂಗತಿಗಳು ಇವರಿಗೆ ನಗಣ್ಯವಾಗಿ ಬಿಡುತ್ತವೆ. ಇದು ನಾಗರಿಕತೆಯ ಹೆಸರಿನಲ್ಲಿ ಮೆರೆಯುವ ಕ್ಷುದ್ರ ಜನಾಂಗದ ಪಾಡು.
ಇಂದಿನ ನಾಗರಿಕತೆಯೇ ನಮಗೆ ಮೂರ್ಖತ್ವವನ್ನು ಕಲಿಸುವ ಪಾಠಶಾಲೆ ಅನ್ನುತ್ತಾನೆ ಡಾ|| ಅಲೆಕ್ಸಿಸ್ ಕಾರೆಲ್...
ಅವನು ಹೇಳುತ್ತಾನೆ :
"ಹಿಂದೆ ಕುಟ್ಟಣದ ಅಕ್ಕಿಯಿಂದ ಜನ ಊಟ ಮಾಡುತ್ತಿದ್ದರು. ಇಂದು ಪಾಲಿಶ್ಡ್ ರೈಸ್ ತಿಂದು ಜನ ಸತ್ವ ಕಳೆದುಕೊಂಡಿದ್ದಾರೆ, ಅಕ್ಕಿ ಪಾಲಿಶ್ ಮಾಡಿದ ತೌಡಿನಿಂದ ನಾವು ವಿಟಮಿನ್ ಮಾತ್ರೆಗಳನ್ನು ಮಾಡಿ
ಮಾರಾಟ ಮಾಡುತ್ತೇವೆ, ಬಣ್ಣ ಬಣ್ಣದ ಸಿಹಿ ಮಾತ್ರೆಗಳನ್ನು ತಿಂದು ಈ ಜನ ನಾವು ನಾಗರೀಕರು ಅಂತ ಭ್ರಮಿಸುತ್ತಾರೆ".
ಹೀಗೆ ಭರ್ತೃಹರಿಯ ಈ ಸುಭಾಷಿತ ದುರ್ವ್ಯಸನಿಗಳ ಕುರಿತಾದದ್ದು... ದುಷ್ಚಟಗಳಿಗೆ ಬಲಿಯಾದ ಮಧ್ಯ, ಮಾದಕದ್ರವ್ಯಗಳ ಸೇವನೆಯಂತ ವ್ಯಸನಿಗಳ ಕುರಿತಾಗಿ ಹೇಳಿದ ಮಾತು.. ಇದು ನಾಯಿಬಾಳಿಗಿಂತ ಕಡೆಯಾದ ಬದುಕು. ಇಂತಹ ಬದುಕು ನಮ್ಮದಾಗಬಾರದು ಎಂದು ಎಚ್ಚರಿಸುತ್ತಾನೆ...

****
There are some fools in this society are deluded that they are people with merit
while their own lives are actually worse than that of dogs. Bhartruhari covers the lives of such people in
this shloka…
This is illustrated through the example of a dog …
There is a dog that sits, chewing on a bone… It gnaws on a very old, dry,
infested bone which does not have even a sliver of flesh sticking to it … The
dog, unmindful of the ‘विगंधि – vigandhi’ i.e. overpowering stench,
continues to chew on it, drenching the bone in its saliva…
(Pujya Acharyaru has pointed out that Bhartruhari’s use of ‘विगंधि – vigandhi’
here,
is incorrect, grammatically. Only something that has ‘गंध –
gandha’
or fragrance that can become ‘गंधि – gandhi.’
Only
four variants of the word ‘गंध –
gandha’
are
possible using the prefixes ‘उत्,
पूति,
सु,
सुरभि - ut, pūti, su, surabhi’ these are ‘उत्गंधि, पूतिगंधि,
सुगंधि,
सुरभिगंधि - utgandhi, pūtigandhi, sugandhi, surabhigandhi…’
Those
well versed in grammar, do not forget this. Bhartruhari was the author of a
great work on grammar ‘वाक्यपदीय-Vākyapadīya’
…. Despite this apparently, the use of विगंधि – vigandhi’
seems to be inappropriate; Pujya Acharaya opines that the more apt word here would
have been’विगंधं – vigandham’).
A malodourous bone which would be odious at mere
sight … it might be the bone of a ‘खरास्थिः – khar
stih’
i.e. a donkey’s bone or an old remnant of some crude animal that the dog chewed
as a tasty and juicy repast.

The dog focused so much on the bone, that
even had the King of demi-gods, namely Lord Indra stood by, next to it, it
would have been oblivious of his presence and continued to chew, shamelessly
and without an iota of doubt… That is part of the dog’s foolishness … There are
many humans too in the same category, observes, Bhartruhari.
Mean-minded people cling to insignificant
things and relish them, considering them to be very highly interesting, in
great taste and very important. This is the fate of those small minded people
who flaunt it as civilized behavior.
Civilisation, says Dr Alexis Carrel, is the school
for all our foolishness. He also says, “Earlier people used to eat hand-pounded,
unpolished rice. Today, people eat polished rice that has lost all its nutrient
content. The residual bran, after polishing the rice, is used for preparation and
sale, as vitamin pills. These coloured pills are consumed by the gullible ‘civilized’
people!”
Bhartruhari has thus composed this subhaṣita
concerning the mean minded … That is, on those who have fallen to low ways,
being addicted to alcoholism, intoxicating drugs etc … this is degradation
lower than dog’s life … he alerts that our lives should not fall into the same
lane …
No comments:
Post a Comment