ಹರ್ತುರ್ಯಾತಿ ನ ಗೋಚರಂ ಕಿಮಪಿ ಕಂ ಪುಷ್ಣಾತಿ ಯತ್ಸರ್ವದಾ-
ಪ್ಯರ್ಥಿಭ್ಯಃ ಪ್ರತಿಪಾದ್ಯಮಾನಮನಿಶಂ ಪ್ರಾಪ್ನೋತಿ ವೃದ್ಧಿಂ ಪರಾಮ್|
ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ ವಿದ್ಯಾಖ್ಯಮಂತರ್ಧನಂ
ಯೇಷಾಂ ತಾನ್ಪ್ರತಿ ಮಾನಮುಜ್ಝತ ನೃಪಾಃ ! ಕಸ್ತೈಃ ಸಹ ಸ್ಪರ್ಧತೇ ||12||
हर्तुर्याति न गोचरं किमपि कं पुष्णाति यत्सर्वदा-
प्यर्थिभ्यः प्रतिपाद्यमानमनिशं प्राप्नोति वृद्धिम्पराम्|
कल्पांतेष्वपि न प्रयाति निधनं विद्याख्यमन्तर्धनं
येषां तान्प्रति मानमुज्झत नृपाः! कस्तैः सह स्पर्धते||12||
harturyāti na gōcaraṁ kimapi kaṁ puṣṇāti yatsarvadā-
pyarthibhyaḥ pratipādyamānamaniśaṁ prāpnōti vr̥d'dhiṁ parām|
kalpāntēṣvapi na prayāti nidhanaṁ vidyākhyamantardhanaṁ
yēṣāṁ tānprati mānamujjhata nr̥pāḥ! kastaiḥ saha spardhatē ||12||
[ಛಂದಸ್ಸು : ಶಾರ್ದೂಲವಿಕ್ರೀಡಿತ, ಹತ್ತೊಂಬತ್ತು ಅಕ್ಷರಗಳ, ನಾಲ್ಕು ಪಾದದ , ಒಟ್ಟು 76 ಅಕ್ಷರಗಳ ಶ್ಲೋಕವಿದು]
[Meter: Shardula Vikridita: 19 x 4 = 76 syllabic counts]
ವಿದ್ಯೆ ಎಷ್ಟು ದೊಡ್ಡ ಸಂಪತ್ತು ಎಂಬುದನ್ನು ಮತ್ತು ಇಂದು ನಾವೆಲ್ಲ ಮರೆತಿರುವ ವಿದ್ಯೆಯ ಮಹತ್ವವನ್ನು
ಭರ್ತೃಹರಿ ನಮಗೆ ತಿಳಿಸಿಕೊಡುವ ಸುಂದರ ಶ್ಲೋಕವಿದು...
ಇಂದು ನಾವು ಸಂಪತ್ತಿಗಾಗಿ ವಿದ್ಯೆಯನ್ನು ಕಲಿಯುತ್ತಿದ್ದೇವೆ ಆದರೆ, ವಿದ್ಯೆಯೇ ಒಂದು ದೊಡ್ಡ ಸಂಪತ್ತು ಎಂಬುದನ್ನು ಮರೆತಿದ್ದೇವೆ....
ನಾವು ಗಳಿಸುವ ಹಣ ಅಥವಾ ಬಾಹ್ಯ ಸಂಪತ್ತನ್ನು ದೋಚಲಿಕ್ಕೆ ನಾನಾ ಬಗೆಯ ಜನರು ಮತ್ತು ದಾರಿಗಳಿವೆ, ಮಾರಾಟ ತೆರಿಗೆ, ಆದಾಯ ತೆರಿಗೆ, ಕಳ್ಳಕಾಕರು... ಹೀಗೆಲ್ಲ. ಆದರೆ ವಿದ್ಯೆಯನ್ನು ನಾವು ಸಂಪತ್ತಾಗಿ ಬಳಸಿದಾಗ, ಇದು ಯಾವ ಕಳ್ಳಕಾಕರ ಕಣ್ಣಿಗೂ ಬೀಳದ, ಯಾರೂ ಅಪಹರಿಸಲಾಗದ ಸಂಪತ್ತಾಗಿರುತ್ತದೆ... ಅಷ್ಟೇ ಅಲ್ಲ ವಿದ್ಯೆಯಿಂದ ಪಡೆಯುವ ಆನಂದ "ಕಿಮಪಿ ಶಂ" ಬೇರಾವುದರಿಂದಲೂ ಸಿಗುವುದಿಲ್ಲ... "ಶಂ" ಅಂದರೆ ಅಂತಃಸುಖ. ನಮ್ಮ ಓದಿನಿಂದ ಒಂದು ಅಪರೂಪದ ಸಂಗತಿ ತಿಳಿದಾಗ, ಅಥವಾ ಒಂದು ಹೊಸ ಅಪೂರ್ವ ಅರ್ಥ ಹೊಳೆದಾಗ ನಮ್ಮ ಒಳಗಿನಿಂದ ಆಗುವ ಆನಂದ ಉಂಟಲ್ಲ , ಅದು ಹೊರಗಿನಿಂದ ನಾವು ಪಡೆಯುವ ಯಾವ ಆನಂದಕ್ಕೂ ಸಮವಲ್ಲ....
ನಮ್ಮ ಬಾಹ್ಯ ಪ್ರಪಂಚದ ಸುಖದಲ್ಲಿ ಅತ್ಯಂತ ಎತ್ತರದ ಸುಖ ಅನ್ನುವ ಸಂಗತಿಯನ್ನೂ ಮೀರಿದ್ದು ವಿದ್ಯೆಯಿಂದ ಬಂದ ಜ್ಞಾನವೆಂಬ ಸುಖ...
ಅದು ಹೇಳಲಿಕ್ಕಾಗದ ಖುಷಿ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುವ ಖುಷಿ... ಇಂಥಾ ಆನಂದವನ್ನು ಬಾಹ್ಯ ಪ್ರಪಂಚದ ಯಾವ ವಸ್ತುವೂ ಕೊಡುವುದಿಲ್ಲವಲ್ಲ...
"ಆರ್ತೋಜಿಜ್ಞಾಸುರರ್ಥಾರ್ಥಿ" ... ಅಂದರೆ , ಹಣವೆಂಬುದು ನಾವು ಕಷ್ಟದಲ್ಲಿದ್ದವರಿಗೆ ಅಥವಾ ಹಣ ಬಯಸಿ ಬಂದವರಿಗೆ ಹಂಚಿದಷ್ಟೂ ನಮ್ಮಲ್ಲಿ ಕಡಿಮೆಯಾಗುವ ಸಂಪತ್ತು,...
ಆದರೆ ವಿದ್ಯೆ ಹಾಗಲ್ಲ , ಜಿಜ್ಞಾಸುಃ - ಅಂದರೆ ಜ್ಞಾನತೃಷೆಯಿಂದ, ವಿದ್ಯೆಯನ್ನು ಬಯಸಿ ಬಂದವರಿಗೆಲ್ಲ ವಿದ್ಯೆಯನ್ನು ನಿರಂತರ ದಾನ ಮಾಡಿದಷ್ಟೂ , ಹಂಚಿದಷ್ಟೂ... ಆ ಜ್ಞಾನ ನಮ್ಮಲ್ಲಿ ವೃದ್ಧಿಹೊಂದುತ್ತಾ ಹೋಗುತ್ತದೆ. ಅಂದರೆ ಇನ್ನೊಬ್ಬರಿಗೆ ಪಾಠ ಹೇಳಿದಷ್ಟೂ ಆ ಜ್ಞಾನ ನಮ್ಮಲ್ಲಿ ಗಟ್ಟಿಗೊಳ್ಳುತ್ತಾ ಹೋಗುತ್ತದೆ.... ಇದು ಎಷ್ಟು ವೃದ್ಧಿ ಹೊಂದುತ್ತದೆ ಅಂದರೆ... ಉದಾಹರಣೆಗೆ ಒಬ್ಬ ಗುರು ಶಿಷ್ಯನಿಗೆ ಪಾಠ ಹೇಳಿದ್ದು , ತಲೆಮಾರು-ತಲೆಮಾರುಗಳ ಆ ಶಿಷ್ಯಪರಂಪರೆಯಲ್ಲಿ ಮುಂದುವರೆದು ಶತ-ಶತಮಾನಗಳ ಆ ಪುಣ್ಯಫಲ ಮೂಲ ಆಚಾರ್ಯ ಪುರುಷನಿಗೆ ಸಲ್ಲುತ್ತದೆ...
ಒಂದು ಪಕ್ಷ ವಿದ್ಯೆಯನ್ನು ಗ್ರಹಿಸುವವರು ಸಿಗದೆ ಹಂಚಲಿಕ್ಕಾಗಲಿಲ್ಲ , ಆಗ ಕೂಡ ನಾವು ಗಳಿಸಿದ ವಿದ್ಯೆ ಮುಂದಿನ ಜನ್ಮದಲ್ಲಿ ಪುನಃ ಮರಳಿಪಡೆದು ಬಳಸಲಿಕ್ಕೆ ಬರುತ್ತದೆ...
ಆದರೆ ಕೂಡಿಟ್ಟ ಧನ ಹಾಗಲ್ಲ , ಒಂದು ವೇಳೆ ಆ ಹಣ ಹಿಂದಿನ ಜನ್ಮದಲ್ಲಿ ತಾನೇ ಸಂಪಾದಿಸಿದ್ದು ಎಂದು ಪೂರ್ವಜನ್ಮ ಸ್ಮರಣೆಯಿಂದ ತಿಳಿದು ಬಂದರೂ ಹಕ್ಕನ್ನು ಚಲಾಯಿಸುವ ಅಧಿಕಾರವಿರುವುದಿಲ್ಲ. ಇದು ಹಣಕ್ಕೂ ವಿದ್ಯೆಗೂ ಇರುವ ವ್ಯತ್ಯಾಸ ಮತ್ತು ವಿದ್ಯೆಗಿರುವ ಮಹತ್ವ..
ಎಷ್ಟು ಜನ್ಮ ಹೀಗೇ ವಿದ್ಯೆಯನ್ನು ಮರಳಿ ಪಡೆಯಬಹುದು ? ಎಂಬ ಪ್ರಶ್ನೆಗೆ - "ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ" ಒಮ್ಮೆ ಗಳಿಸಿದ ವಿದ್ಯೆ ಅಥವಾ ಜ್ಞಾನ ಕಲ್ಪದ ಅಂತ್ಯದಲ್ಲಿಯೂ ನಾಶ ಹೊಂದುವುದಿಲ್ಲ ಅನ್ನುತ್ತಾನೆ ಭರ್ತೃಹರಿ.
ಜ್ಞಾನಕ್ಕೆ ಎಂದೂ ನಾಶ ಇಲ್ಲ... ಒಂದು ಜನ್ಮದಲ್ಲಿ ಗಳಿಸಿದ ಜ್ಞಾನ ಜನ್ಮಾಂತರಗಳಲ್ಲಿ ಮತ್ತೆ ಬೆಳೆಯುವುದೇ ಹೊರತು ಎಂದೂ ನಾಶ ಹೊಂದುವುದಿಲ್ಲ...
ಒಂದು ಕಲ್ಪಕಾಲ ಅಂದರೆ , "ಚತುರ್ಯುಗ ಸಹಸ್ರಾಂತೇ ಬ್ರಹ್ಮಣೋ ದಿನಮುಚ್ಯತೆ" .. ಅಂದರೆ, 4,32,000 ವರ್ಷಗಳು ಕಲಿಯುಗ, ಇದರ ಎರಡು ಪಟ್ಟು ದ್ವಾಪರ, ಮೂರು ಪಟ್ಟು ತ್ತ್ರೇತಾ, ನಾಲ್ಕು ಪಟ್ಟು ಕೃತ... ಹೀಗೆ ಒಟ್ಟಾಗಿ 43,20,000 ವರ್ಷಗಳು ಒಂದು ಚತುರ್ಯುಗ ವರ್ಷಗಳಾಗುತ್ತವೆ. ಇಂಥಹ 1000 ಚತುರ್ಯುಗ ವರ್ಷಗಳು ಕಳೆಯುವುದೇ ಬ್ರಹ್ಮನ ದಿನಕಲ್ಪ. ಅದೇ 432 ಕೋಟಿ ನಮ್ಮ ವರ್ಷಗಳ ಬ್ರಹ್ಮದೇವರ ಹಗಲು.. ಈ ಹಗಲು ಮುಗಿದು ರಾತ್ರಿಗೆ ಜಾರುವ ಕಾಲವೇ "ಕಲ್ಪಾಂತ್ಯ"... ಮತ್ತೆ 432 ಕೋಟಿ ವರ್ಷಕಾಲ ಬ್ರಹ್ಮದೇವರ ರಾತ್ರಿಕಲ್ಪ.. ಈ ದೀರ್ಘನಿದ್ರೆಯಿಂದ ಮತ್ತೆ ಸೃಷ್ಟಿಗೆ ಹೊರಬಂದಾಗಲೂ ಒಂದು ಜೀವಕ್ಕೆ ಆ ಹಿಂದಿನ ಕಲ್ಪಾಂತ್ಯದವರೆಗೆ ಗಳಿಸಿದ ಜ್ಞಾನ ಮಾಸುವುದಿಲ್ಲ... ಇದು ದಿನಕಲ್ಪ... ಇದರಂತೆಯೇ ಮಹಾಕಲ್ಪ ಪ್ರಳಯದಲ್ಲೂ ಕೂಡ ಎಂಬುದು ಶಾಸ್ತ್ರಕಾರರ ಅಭಿಮತ...
"ಮಹಾಕಲ್ಪಕಾಲ" ಅಂದರೆ ಬ್ರಹ್ಮದೇವರ ಪೂರ್ಣಾಯುಷ್ಯ, ಅದೇ ಬ್ರಹ್ಮನ ನೂರು ವರ್ಷ.. ಅದನ್ನು ನಮ್ಮ ವರ್ಷದಲ್ಲಿ ಗಣನೆಮಾಡಿಗಾದ 31,104 ಸಾವಿರ ಕೋಟಿ ವರ್ಷಗಳಾಗುತ್ತವೆ
(31,104,000,00,00,000 ವರ್ಷಗಳು)
ಬ್ರಹ್ಮದೇವರ ಇಷ್ಟು ಕಾಲ ಮುಗಿದ ಮೇಲೆ ಮತ್ತೆ ಅಷ್ಟೇ ಕಾಲ ಪ್ರಳಯ... ಹಾಗಾದಾಗಲೂ ಮತ್ತೆ ಸೃಷ್ಟಿ ಶುರುವಾದಾಗ ಹಿಂದೆ ಗಳಿಸಿದ ಜ್ಞಾನ ಜಾಗೃತವಾಗುತ್ತದೆ... ಆದ್ದರಿಂದ ಜ್ಞಾನಕ್ಕೆ ಎಂದಿಗೂ ನಾಶವಿಲ್ಲ...
ಎರಡು ಮನ್ವಂತರಗಳ ನಡುವೆ ಸುಮಾರು 1500 ವರ್ಷಗಳ ಪ್ರಳಯಕಾಲದಲ್ಲಿ ಭಗವಂತ ಮತ್ಸ್ಯರೂಪದಿಂದ ಮುಂದಿನ ಮನ್ವಂತರದ ಮನು ಮತ್ತು ಹಿಂದಿನ ಮನ್ವಂತರದ ವೇದಜ್ಞರಾದ ಋಷಿಮುನಿಗಳನ್ನು ತನ್ನ ಮತ್ಸ್ಯರೂಪವೆಂಬ ಮೀನಿನಾಕಾರದ ದೋಣಿಯಲ್ಲಿ ಕೂಡಿಸಿಕೊಂಡು ರಕ್ಷಿಸುತ್ತಾ ಮುಂದಿನ ಮನ್ವಂತರದ ಸೃಷ್ಟಿಯಲ್ಲಿನ ಜ್ಞಾನಪ್ರಸಾರಕ್ಕೆ ಅನುವು ಮಾಡಿಕೊಡುತ್ತಾನೆ ಹಾಗೆ ಭಗವಂತನಿಂದಲೇ ಜ್ಞಾನ ಎಂದೂ ಸುರಕ್ಷಿತ... ಆದ್ದರಿಂದ "ವಿದ್ಯಾಖ್ಯಮಂತರ್ಧನಂ" ವಿದ್ಯೆ ಒಳಗಿನ ಸಂಪತ್ತು...ನಮ್ಮ ಆತ್ಮಾಭಿವೃದ್ಧಿಗೆ ಸಂಬಂಧಪಟ್ಟ ಮಹತ್ವದ ಸಂಪತ್ತು...
ಹೊರಗಿನ ಸಂಪತ್ತು ಹಾಗಲ್ಲ. ಬಾಹ್ಯ ಸಂಪತ್ತು ಅವಿವೇಕದ ಜೊತೆಗೇ ನಮ್ಮೊಟ್ಟಿಗೆ ಬರುವಂತದು... ಆದ್ದರಿಂದ ಅದು ನಮ್ಮ ಅಧಃಪಾತಕ್ಕೂ ಕಾರಣವಾಗಬಹುದು...
"ನ ಸಾಂಪರಾಯ ಪ್ರತಿಭಾತಿ ಬಾಲಂ|
ಪ್ರಮಾದ್ಯಂತಂ ವಿತ್ತ ಮೋಹೇನ ಮೂಢಂ||"
ಭಗವಂತ ಅಂಥ ಬಾಲಿಶ ಸ್ವಭಾವದ ಮಂದಿಗೆ ಸಿಕ್ಕುವುದಿಲ್ಲ... ಏಕೆಂದರೆ ಶ್ರೀಮಂತಿಕೆಯಿಂದ ದುಡ್ಡಿನ ಮೋಹಕ್ಕೆ ಬಲಿಯಾಗಿ ದಾರಿ ತಪ್ಪಿದವರು ಭಗವಂತನ ಬಳಿಗೆ ಅರ್ಥಾತ್ ಜ್ಞಾನದ ದಾರಿಗೆ ಹೋಗಲಾರರು...
ಜ್ಞಾನದ ಸಂಪತ್ತಿಗೆ ಸಮಾನವಾದ ಯಾವ ಸಂಪತ್ತೂ ಇಲ್ಲ ಎಂದು ಅರಿತವರು ಯಾರು ಇದ್ದಾರೆಯೋ ಅಂಥಹ ಜ್ಞಾನಿಗಳ ಮುಂದೆ "ಎಲೈ ರಾಜರೇ !! " ನಿಮ್ಮ ಶ್ರೀಮಂತಿಕೆಯ ಅಹಂಕಾರದಿಂದ, ಐಶ್ವರ್ಯದ ಮತ್ತು ದೇಶವನ್ನಾಳುವ ಅಧಿಕಾರದ ಗತ್ತನ್ನು ತೋರಿಸಬೇಡಿ. ಜ್ಞಾನಿಗಳ ಮುಂದೆ ನಿಮ್ಮ ಸಂಪತ್ತಿಗೆ ಯಾವ ಕಾಸಿನ ಬೆಲೆಯೂ ಇಲ್ಲ.. ಏಕೆಂದರೆ ಜ್ಞಾನಿಗಳ, ವಿದ್ವಾಂಸರ ಮುಂದೆ ಸ್ಪರ್ಧೆಗಿಳಿಯುವ ತಾಕತ್ತು ಯಾರಿಗೂ ಇರುವುದಿಲ್ಲ! ವಿದ್ಯೆಯ ಸಂಪತ್ತು ಅಷ್ಟು ದೊಡ್ಡದು...
ಆದ್ದರಿಂದ ವಿದ್ವಾಂಸರನ್ನು, ಜ್ಞಾನಿಗಳನ್ನು ಕಡೆಗಣಿಸದೆ ಗೌರವಿಸಿ...ಎಂದು ಬುದ್ಧಿವಾದ ಹೇಳುತ್ತಾನೆ ಭರ್ತೃಹರಿ...
ಮೂಲತಃ, ಇಲ್ಲಿ ಭರ್ತೃಹರಿ ತಾನು ಹಿಂದೆ ಅನುಭವಿಸಿದ, ಆ ಕಾಲದಲ್ಲಿದ್ದ , ಸಂಪತ್ತಿನ, ಶ್ರೀಮಂತಿಕೆಯ, ಅಧಿಕಾರದ ಅಹಂಕಾರದಿಂದ ಮೆರೆಯುತ್ತಿದ್ದ ರಾಜರುಗಳಿಗೆ, ಶ್ರೀಮಂತರಿಗೆ ವಿದ್ವಾಂಸರ ಬಗೆಗೆ ಕೊಟ್ಟ ಎಚ್ಚರಿಕೆಯ ಮಾತುಗಳಿವು....

🔹🔹🔹🔹