Thursday, March 3, 2016

Neeti Shataka Shloka 14

ಅಂಭೋಜಿನೀ ವನವಿಹಾರವಿಲಾಸಮೇವ
ಹಂಸಸ್ಯ ಹಂತಿ ನಿತರಾಂ ಕುಪಿತೋ ವಿಧಾತಾ |
ನ ತ್ವಸ್ಯ ದುಗ್ಧಜಲಭೇದವಿಧೌ ಪ್ರಸಿದ್ಧಾಂ
ವೈದಗ್ಧ್ಯಕೀರ್ತಿಮಪಹರ್ತುಮಸೌ ಸಮರ್ಥಃ||14||

अम्भोजिनी वनविहारविलासमेव
हंसस्य हन्ति नितरां कुपितो विधाता|
न त्वस्य दुग्धजलभेदविधौ प्रसिद्धां
वैदग्ध्यकीर्तिमपहर्तुमसौ समर्थः||14||

ambhōjinī vanavihāravilāsamēva
hansasya hanti nitarāṁ kupitō vidhātā |
na tvasya dugdhajalabhēdavidhau prasid'dhāṁ
vai dagdhyakīrtimapahartumasau samarthaḥ||14||

*     *     *     *     *

ಛಂದಸ್:
ಈ ಶ್ಲೋಕ ವಸಂತತಿಲಕಾ ವೃತ್ತದಲ್ಲಿದೆ...
"ಉಕ್ತಾ ವಸಂತತಿಲಕಾ ತಭಜಾ ಜಗೌಗಃ" ಎಂಬುದು ಈ ಛಂದಸ್ಸಿನ ಲಕ್ಷಣ...

Meter:
This stotra is in ‘वसन्त तिलक - Vasanta Tilaka’ meter. This is 14 x 4 = 56 syllables in all with a pause after the eighth. The meter is described as “उक्ता वसन्ततिलक तभजा जगौगः - Uktā vasantatilaka tabhajā jagaugaḥ”

*     *     *     *     *

ಒಬ್ಬ ರಾಜನಿಗೆ ಅಥವಾ  ಶ್ರೀಮಂತನಿಗೆ ಒಬ್ಬ ವಿದ್ವಾಂಸನನ್ನು ನಿಯಂತ್ರಿಸಬೇಕು ಎಂಬ ದುಷ್ಟಬುದ್ಧಿ ಬಂದರೆ, ಆ ರಾಜ ಏನು ಮಾಡಬಹುದು ಅನ್ನುವುದನ್ನು ಒಂದು ಸುಂದರ ದೃಷ್ಟಾಂತದ ಮೂಲಕ ಭರ್ತೃಹರಿ ವಿವರಿಸುತ್ತಾನೆ....

ಒಂದು ಹಂಸ ಇದೆ.  ಚತುರ್ಮುಖ ಬ್ರಹ್ಮನಿಗೇ ಆ ಹಂಸದ ಮೇಲೆ ಸಿಟ್ಟು ಬಂದಿದೆ ಅಂತ ಇಟ್ಟುಕೊಳ್ಳೋಣ... ಆಗ ಬ್ರಹ್ಮನೇ ಆದರೂ ಕೂಡ ಆ ಹಂಸಕ್ಕೆ ಏನುತಾನೆ ಮಾಡಿಯಾನು?

ಕಮಲದ ಹೂವಿನ ಸರೋವರದಲ್ಲಿ ವಿಹರಿಸುವುದು ಹಂಸಗಳಿಗೆ ಬಹಳ ಇಷ್ಟ ...  ಅದನ್ನು ನೋಡುವವರಿಗೂ ಒಂದು ಸಂಭ್ರಮ...  ಕೋಪಗೊಂಡ ಬ್ರಹ್ಮ ಆ ಪರಿಸರವನ್ನು ನಾಶಮಾಡಿ ಆ ಹಂಸಕ್ಕೆ ತೊಂದರೆ ಕೊಡಬಹುದಷ್ಟೇ ಹೊರತು ಹಂಸದ ಗುಣವನ್ನು ನಾಶಪಡಿಸಲಿಕ್ಕೆ ಬರುವುದಿಲ್ಲ... ಹಂಸಗಳಿಗಿರುವ ವೈದುಷ್ಯ , ಬುದ್ಧಿವಂತಿಕೆ ಎಂದರೆ, ಹಾಲು-ನೀರು ಬೆರೆಸಿದಾಗ ಹಾಲನ್ನು ನೀರಿನಿಂದ ಬೇರ್ಪಡಿಸುವ ಕಲೆ. ಹಂಸಗಳಿಗಿರುವ ಆ ಶಕ್ತಿಯನ್ನು ಚತುರ್ಮುಖ ಬ್ರಹ್ಮನಿಗೂ ನಾಶಪಡಿಸಲು ಸಾಧ್ಯವಿಲ್ಲ... ಅದು ಹಂಸದ ಸ್ವಂತ ಅರ್ಹತೆ , ಸ್ವಭಾವ...

ಇಲ್ಲಿ ಚತುರ್ಮುಖನನ್ನು ಒಬ್ಬ ರಾಜನಿಗೆ ದೃಷ್ಟಾಂತ ಕೊಟ್ಟು ಹೇಳಿದ ಮಾತಿದು... ಹಾಗೆ, ಒಬ್ಬ ರಾಜ ಕೂಡ ಒಬ್ಬ ವಿದ್ವಾಂಸನ ಮೇಲೆ ಕೋಪಗೊಂಡು ಆ ವಿದ್ವಾಂಸನ ಸ್ವತ್ತು, ಸವಲತ್ತುಗಳನ್ನು ವಶಪಡಿಸಿಕೊಂಡು ಆ ವಿದ್ವಾಂಸನನ್ನು ತನ್ನ ರಾಜ್ಯದಿಂದ ಹೊರಹಾಕಬಹುದು
ಆದರೆ, ಎಂದೂ ಅವನ ವಿದ್ವತ್ತನ್ನು ಕಿತ್ತುಕೊಳ್ಳಲಾರ...  ಅದು ಜ್ಞಾನಿಯ ಅಂತರಂಗದ ಸ್ವತ್ತು... "ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ" ಎಂಬಂತೆ ಇನ್ನೊಂದು ರಾಜ್ಯದಲ್ಲಿ ಆ ವಿದ್ವಾಂಸ ಸುಖದಿಂದ ಬದುಕುತ್ತಾನೆ... ಆದ್ದರಿಂದ ಒಬ್ಬ ವಿದ್ವಾಂಸನ ಪಾಂಡಿತ್ಯದ ಸಾಮರ್ಥ್ಯವನ್ನು , ಕೀರ್ತಿಯನ್ನು ನಾಶಪಡಿಸಲು ಒಬ್ಬ ರಾಜನಿಗೂ ಸಾಧ್ಯವಿಲ್ಲ... ಆದ್ದರಿಂದ ದುಡ್ಡಿನ, ಅಧಿಕಾರದ ಅಹಂಕಾರದಿಂದ ವಿದ್ವಾಂಸರನ್ನು ಅವಮಾನಿಸಬೇಡ ಎಂದು ಒಬ್ಬ ರಾಜನಿಗೆ ಭರ್ತೃಹರಿ ಹೇಳಿದ ಬುದ್ಧಿಮಾತಿದು...

ಈ ಶ್ಲೋಕ ವಸಂತತಿಲಕಾ ವೃತ್ತದಲ್ಲಿದೆ...
"ಉಕ್ತಾ ವಸಂತತಿಲಕಾ ತಭಜಾ ಜಗೌಗಃ" ಎಂಬುದು ಈ ಛಂದಸ್ಸಿನ ಲಕ್ಷಣ...
****

Bhartruhari, through a wonderful illustration here, tells us what would happen should a King or a rich person, entertain the evil thought of keeping a watch over the scholars…

Let’s consider a swan and an eventuality where Chaturmukha Brahma turns his ire on it. He says, “Even if so, what would Brahma be able to do to the swan?”

Swans love to wander freely amongst lotuses in a lake … This scenario is exhilarating to even those get to see it … An angered Brahma, at best might be able to trouble the swan by destroying its environs but he would not be able to change the inborn nature of the swan … The erudition in swans, brilliance viz., their skilfullness in sifting milk from water, from water diluted milk. This strength of swans cannot be destroyed even by Chaturmukha Brahma … That is a swan’s innate capability and nature …

In this illustration, a statement is made, by likening  a King to Chaturmukha Brahma … In the same manner, a king too, turning his anger on a scholar may have all his assets seized, comforts denied and banish him from his kingdom. He can however not snatch away his learning … That is the scholar’s inner wealth … As is said, ‘स्वदेशे पूज्यते राजा  विद्वान् सर्वत्र पूज्यते - swadēśē pūjyatē rājā vidwan sarvatra pūjyatē’ a scholar can live happily in another kingdom too ... Therefore it is not possible for a king to obliterate the erudition, capabilities or fame of a scholar ... Bhartruhari thereby counsels a king not to insult a scholar from the backdrop of his own wealth, authority or arrogance …

No comments:

Post a Comment